ಜಿಲ್ಲೆ

ಪೋಸ್ ಕೊಡುವ ಕಲೆ ನಮಗೆ ಗೊತ್ತಿಲ್ಲ; ಸಚಿವ ಸತೀಶ ಜಾರಕಿಹೊಳಿ‌

ಮಂಜುನಾಥ ಕೋಳಿಗುಡ್ಡ

ನಾನು ಆಯುರ್ವೇದಿಕ ಡಾಕ್ಟರ್ ಇದ್ದ ಹಾಗೆ ನಮ್ಮದು ಸ್ಲೋ ಮಾರ್ಮಿಕ ಮಾತು*

ಬೆಳಗಾವಿ: ಹುಕ್ಕೇರಿ ತಾಲೂಕಿನಲ್ಲಿ ಹೊರಗಿನವರಿಗೆ ಆಡಳಿತ ನಡೆಸುವ ಅವಕಾಶ ನೀಡುವುದಿಲ್ಲ ಎನ್ನುವ ರಮೇಶ ಕತ್ತಿ ಹೇಳಿಕೆಗೆ ಸಚಿವ ಸತೀಶ ಜಾರಕಿಹೊಳಿ‌ ತಿರುಗೇಟು ನೀಡಿದ್ದಾರೆ.

ತಾಲೂಕಿನ ನೀಡಸೋಸಿ ದುರದುಂಡೇಶ್ವರ ಮಠದಲ್ಲಿ ಶನಿವಾರ ಪೀಠಾಧಿಪತಿ ಪಂಚಮ ಶಿವಲಿಂಗೇಶ್ವರ ಶ್ರೀಗಳ ಜೊತೆಗೆ ಗೌಪ್ಯ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಮಯ ಬಂದಾಗ ರಮೇಶ ಕತ್ತಿ ಹೇಳಿಕೆಗೆ ಉತ್ತರ ಕೊಡುತ್ತೇನೆ‌. ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘಕ್ಕೆ ಚುನಾವಣೆ ಮಾಡುವ ವಿಚಾರ ಸಧ್ಯಕ್ಕಿಲ್ಲ. ಮುಖಂಡರ ಜೊತೆಗೆ ಚರ್ಚೆ ಮಾಡುತ್ತೇವೆ

ಜನರಿಗೆ ಒಳ್ಳೆಯದು ಆಗುವದನ್ನು ಮಾಡುತ್ತೇವೆ ಎಂದರು.

ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘದಲ್ಲಿ ನೌಕರರ ಖಾಯಂಮಾತಿಯನ್ನ ನಾವು ಮಾಡಿದ್ದೇವೆ. ಸಚಿವ ಸತೀಶ ಜಾರಕಿಹೊಳಿ‌ ಅವರು ಈಗ ಬಂದು ಆದೇಶ ಪತ್ರ ನೀಡಿ ಫೋಸ್ ಕೊಟ್ಟಿದ್ದಾರೆ ಎನ್ನುವ ‌ಮಾಜಿ ಅಧ್ಯಕ್ಷ ಕಲಗೌಡ ಪಾಟೀಲ ಆರೋಪಕ್ಕೆ ತಿರುಗೇಟು ನೀಡಿದ ಸತೀಶ ಪೋಸ್ ಕೊಡುವ ಅವಶ್ಯಕತೆ ನಮಗೆ ಇಲ್ಲ.ಪೋಸ್ ಕೊಡುವ ಕಲೆ ನಮ್ಮಲಿಲ್ಲ. ಸಮಯ ಬಂದಾಗ ಹೇಳುತ್ತೇವೆ ಎಂದು ಅವರು ಹೇಳಿದರು.

ಹುಕ್ಕೇರಿ ಮತಕ್ಷೇತ್ರದಲ್ಲಿ ಸಮಾವೇಶ ಮಾಡುವದಿಲ್ಲ. ಸಮಾವೇಶದ ಮೇಲೆ ಭರವಸೆ ಇಲ್ಲ‌. 5 ಲಕ್ಷ ಜನರನ್ನ ನಾವು ಸೇರಿಸಿದ್ದೇವೆ, ನಿನ್ನೆ ನಡೆದ ಸಮಾವೇಶದಲ್ಲಿ 2 ಸಾವಿರ ಜನ ಇದ್ದರು. ಜನ ಕೂಡಿಸುವದು ನಮಗೆ ಹೊಸದೇನಲ್ಲ. ಕತ್ತಿ ಕುಟುಂಬಕ್ಕೆ ಅರ್ಜಂಟ್ ಇದ್ದಷ್ಟು ನನಗೆ ಇಲ್ಲ. ನಾನು ಆಯುರ್ವೇದಿಕ ಡಾಕ್ಟರ್ ಇದ್ದ ಹಾಗೆ ನಮ್ಮದು ಸ್ಲೋ ಇರುತ್ತೆ ಎಂದು ಅವರು ತಿರುಗೇಟು ನೀಡಿದರು.

ಈ ಸಂಧರ್ಭದಲ್ಲಿ ಮುಖಂಡರಾದ ಕಿರಣ ರಜಪೂತ, ಬಸವೇಶ ಪಟ್ಟಣಶೆಟ್ಟಿ, ರಿಷಭ್ ಪಾಟೀಲ, ಮಹಾಂತೇಶ ಮಗದುಮ್ಮ, ಮೌನೇಶ ಪೋತದಾರ, ಇಲಿಯಾಸ ಇನಾಮದಾರ, ಸಂಜು ಗಂಡ್ರೋಳಿ, ಬಂಡು ಹತನೂರೆ, ಅಮರ ನಲವಡೆ, ಅಜೀತ ಕರಜಗಿ, ಶಾನುಲ್ ತಹಶಿಲ್ದಾರ, ಜಯಪ್ರಕಾಶ ಕರಜಗಿ, ದಿಲೀಪ ಹೊಸಮನಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

--- *ಬಾಕ್ಸ್* ---

*20 ವರ್ಷದಿಂದ ನಮ್ಮ ವಿರುದ್ಧ ಸಭೆ*

ಬೆಳಗಾವಿ ಜಿಲ್ಲೆಯಲ್ಲಿ ಜಾರಕಿಹೊಳಿ ಕುಟುಂಬದ ವಿರುದ್ಧ ಮಹಾರಾಷ್ಟ್ರದ ಕೊಲ್ಲಾಪೂರ ಜಿಲ್ಲೆಯ ಕನ್ನೇರಿ ಮಠದಲ್ಲಿ ಲಿಂಗಾಯತ ಮುಖಂಡರ ಸಭೆ ವಿಚಾರಕ್ಕೆ ಸಚಿವ ಸತೀಶ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ.

ನೀಡಸೋಸಿಯಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಅವರು, 20 ವರ್ಷಗಳಿಂದ ನಮ್ಮ ವಿರುದ್ಧ ಸಭೆಗಳು ನಡೆಯುತ್ತಲೆ ಇವೆ. ಅವರ ಶಕ್ತಿ ಅವರು ಪ್ರದರ್ಶನ ಮಾಡಲಿ ನಮ್ಮ ಒಗ್ಗಟ್ಟನ್ನು ನಾವು ಪ್ರದರ್ಶನ ಮಾಡುತ್ತೇವೆ. ಇದು ರಾಜಕೀಯದಲ್ಲಿ ಸ್ವಾಭಾವಿಕ. ಕನ್ನೇರಿ ಮಠದಲ್ಲಿನ ಸಭೆಯ ಬಗ್ಗೆ ನನಗೆ ಮಾಹಿತಿ ಇದೆ. ಅದು ಸಭೆಯಷ್ಟೇ ಪ್ರಾಯೋಗಿಕವಾಗಿ ಅದು ಜಾರಿಯಾಗಲ್ಲ ಎಂದರು.