ಜಿಲ್ಲೆ

ಅಂಧರಿಗೆ ಊರುಗೋಲು ವಿತರಣೆ

ಲಲಾಟಾಕ್ಷ ಎಸ್

ಅರಕಲಗೂಡು: ದೃಷ್ಟಿ ಕಳೆದುಕೊಂಡು ಸಂಕಷ್ಟದಲ್ಲಿರುವ ಅಂಧರಿಗೆ ನೆರವು ನೀಡುವ ಉದ್ದೇಶದಿಂದ ತಂಬಾಕು ಮಂಡಳಿ ವಿವಿಧ ಸಲಕರಣೆಗಳನ್ನು ಉಚಿತವಾಗಿ ಒದಗಿಸುತ್ತಿದೆ ಎಂದು ಮಂಡಳಿಯ ಪಿರಿಯಾಪಟ್ಟಣ ಪ್ರಾದೇಶಿಕ ಕಚೇರಿ ಅಧೀಕ್ಷಕಿ ಸುರೇಖಾ ಹೇಳಿದರು.


ತಾಲೂಕಿನ ಶೀಬಳ್ಳಿ ಗ್ರಾಮದಲ್ಲಿ ಅಂಧರಿಗೆ ಊರುಗೋಲು ವಿತರಿಸಿ ಮಾತನಾಡಿದ ಅವರು, ಸ್ವಚ್ಛತಾ ಪಖ್ವಾಡ್ ಯೋಜನೆಯಡಿ ತಂಬಾಕು ಮಂಡಳಿ ರೂಪಿಸಿದ ಕ್ರಿಯಾಯೋಜನೆ ಪ್ರಕಾರ ಹಳ್ಳಿಗಳಲ್ಲಿ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಶೌಚಗೃಹಗಳಿಗೆ ಸುಲಭವಾಗಿ ತೆರಳಲು ಅನುಕೂಲವಾಗುವ ನಿಟ್ಟಿನಲ್ಲಿ ಗ್ರಾಮಗಳಿಗೆ ಭೇಟಿ ನೀಡಿ ಅಂಧರಿಗೆ ಊರುಗೋಲುಗಳನ್ನು ನೀಡುವ ಮೂಲಕ ಅವುಗಳನ್ನು ಬಳಸುವ ವಿಧಾನದ ಮಾಹಿತಿ ನೀಡಲಾಗಿದೆ ಎಂದರು.


ರಾಮನಾಥಪುರ ತಂಬಾಕು ಮಾರುಕಟ್ಟೆ 07ರ ಹರಾಜು ಅಧೀಕ್ಷಕಿ ಸವಿತಾ, 63ರ ಹರಾಜು ಅಧೀಕ್ಷಕ ಬ್ರಿಜ್ ಭೂಷಣ್, ತಾಲೂಕು ರೈತ ಸಂಘದ ಅಧ್ಯಕ್ಷ ಯೋಗಣ್ಣ, ಕೃಷ್ಣೇಗೌಡ, ಮಾರುಕಟ್ಟೆ ಕ್ಷೇತ್ರಾಧಿಕಾರಿಗಳು ಇದ್ದರು.