ತಾವರಗೇರಾ: ಕಾಲೇಜು ವಿದ್ಯಾರ್ಥಿಯೊಬ್ಬ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಹುಲಿಯಾಪೂರ ಗ್ರಾಮದಲ್ಲಿ ಸೋಮವಾರ ನಡೆದಿದೆ.
ಇದನ್ನೂ ಓದಿ:http://ಕ್ರಿಮಿನಾಶಕ ಸೇವಿಸಿ ವಿದ್ಯಾರ್ಥಿ ಸಾವು
ಮಹಾಲಿಂಗರಾಯ ಚಿದಾನಂದಪ್ಪ ಕಜ್ಜೇರ್ ( 18 ) ಮೃತ, ಮೂಲತಃ ಕಳಮಳ್ಳಿ ಗ್ರಾಮದವನು. ಹುಲಿಯಾಪೂರ ಅಜ್ಜಿಯ ಮನೆಯಲ್ಲಿದ.್ದ ಸೋಮವಾರ ಬೆಳಗ್ಗೆ ಬಹಿರ್ದೆಶೆಗೆ ಹೋಗಿದ್ದ ವೇಳೆ ಕ್ರಿಮಿನಾಶಕ ಸೇವಿಸಿ ಅಸ್ವಸ್ಥನಾಗಿದ್ದಾನೆ.
ಕುಷ್ಟಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ. ಸುದ್ದಿ ತಿಳಿದು ಶಾಸಕ ದೊಡ್ಡನಗೌಡ ಪಾಟೀಲ ಆಗಮಿಸಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಮರಣೋತ್ತರ ಪರೀಕ್ಷೆ ನಂತರ ಪಾರ್ಥೀವ ಶರೀರವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ತಾವರಗೇರಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.