ಜಿಲ್ಲೆ

ಜಿಲ್ಲಾಸ್ಪತ್ರೆಯಲ್ಲಿ ನೋಂದಣಿ ಕೌಂಟರ್ ಹೆಚ್ಚಿಸಲು ಕ್ರಮ

ಬೆಳಗಾವಿ: ಸರ್ಕಾರಿ ಆಸ್ಪತ್ರೆಗಳಲ್ಲಿ ಹೊರ ರೋಗಿಗಳು ಸರತಿಯಲ್ಲಿ ನಿಂತು ನೋಂದಣಿ ಮಾಡಿಕೊಳ್ಳುವುದನ್ನು ತಪ್ಪಿಸಲು ಕೌಂಟರ್‌ಗಳ ಸಂಖ್ಯೆ ಹೆಚ್ಚಿಸುವಂತೆ ಸೂಚಿಸಲಾಗುವುದು ಎಂದು ಜಿಲ್ಲಾಕಾರಿ ಮೊಹಮ್ಮದ್ ರೋಷನ್ ಭರವಸೆ ನೀಡಿದರು.

ಆಸ್ಪತ್ರೆಗಳ ವಿವಿಧ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆ್ ಇಂಡಿಯಾ (ಕಮ್ಯೂನಿಸ್ಟ್) ಪಕ್ಷದ ನಿಯೋಗದ ಜತೆ ಜಿಲ್ಲಾ ಆರೋಗ್ಯಾಕಾರಿಗಳ ಕಚೇರಿಯಲ್ಲಿ ಗುರುವಾರ ಸಭೆ ನಡೆಸಿದ ಅವರು, ಸಮಸ್ಯೆಗಳ ಕುರಿತಾಗಿ ಚರ್ಚಿಸಿದರು. ಪಕ್ಷದ ರಾಜ್ಯ ಸಮಿತಿ ಸದಸ್ಯ ರಾಮಾಂಜನಪ್ಪ ಆಲ್ದಳ್ಳಿ, ಆರೋಗ್ಯ ವ್ಯವಸ್ಥೆಯ ಲೋಪದೋಷ ತಿಳಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಕಾರಿ, ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡಲಿಚ್ಚಿಸುವ ವೈದ್ಯರನ್ನು ಕೂಡಲೇ ನೇಮಕ ಮಾಡಿಕೊಳ್ಳಲಾಗುವುದು. ಆಸ್ಪತ್ರೆಗಳಲ್ಲಿ ಎಲ್ಲ ರೀತಿಯ ಔಷಧ ಲಭ್ಯವಿರುವಂತೆ ನೋಡಿಕೊಳ್ಳಲಾಗುವುದು. ಅನಗತ್ಯ ಟೆಸ್ಟ್ ಮಾಡಿಸದಂತೆ ಸೂಚಿಸಿ, ಅವುಗಳ ವರದಿ ಕೂಡಲೇ ನೀಡಲು ಆದೇಶಿಸುವುದಾಗಿ ತಿಳಿಸಿದರು.

ಅನಕ್ಷರಸ್ಥ ರೋಗಿಗಳಿಗೆ ಸಹಾಯಕ್ಕಾಗಿ ಸಹಾಯಕರ ನೇಮಕ ಮಾಡುವುದು. ಹೊಸ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ವೈದ್ಯರ ನೇಮಕ ಹಾಗೂ ಇತರ ಸಮಸ್ಯೆ ಬಗೆಹರಿಸಲು ಉನ್ನತ ಮಟ್ಟದ ಸಭೆ ಕರೆಯಲಾಗುವುದು ಎಂದರು.

ಜಿಲ್ಲಾ ವೈದ್ಯಾಕಾರಿ ಡಾ.ಈಶ್ವರ ಗಡೇದ, ಎಸ್‌ಯುಸಿಐ ಕಮ್ಯೂನಿಸ್ಟ್ ಪಕ್ಷದ ಲಕ್ಷ್ಮಣ ಜಡಗನ್ನವರ, ಕಾರ್ಯಕರ್ತರಾದ ರಾಜಿ ಗಾಣಗಿ, ಭರಮಪ್ಪ ಮಾಶ್ಯಾನಟ್ಟಿ, ಯೂನುಸ್ ಬಾಗವಾನ ಇತರರಿದ್ದರು.