ಬನಹಟ್ಟಿಯಲ್ಲಿ ದೇವದಾಸಿ ಪದ್ಧತಿ ನಿರ್ಮೂಲನೆ ಕುರಿತು ನಡೆದ ಕಾನೂನು ಅರಿವು-ನೆರವು ಕಾರ್ಯಕ್ರಮದಲ್ಲಿ ಹಿರಿಯ ಶ್ರೇಣಿ ನ್ಯಾಯಾಧೀಶ ಕಿರಣಕುಮಾರ ವಡಗೇರಿ ಮಾತನಾಡಿದರು. ಟಿ.ಸಿ. ಶುಷ್ಮಾ, ಮಧು ಲೋಕಾಪುರ, ಎಂ.ಬಿ. ಮಧುರಖಂಡಿ, ಸುಮಂಗಲಾ ಹಿರೇಮನಿ, ಭವ್ಯ ಆರ್., ಎಸ್.ಜಿ. ಕೌಜಲಗಿ, ಎಸ್.ಜಿ. ಸಲಬನ್ನವರ ಮತ್ತಿತರರಿದ್ದರು. 
ಜಿಲ್ಲೆ

ದೇವದಾಸಿ ಪದ್ಧತಿ ನಿರ್ಮೂಲನೆಗೆ ಕ್ರಮ

ವಿನಯ ಆಶೋಕ ನಾಯ್ಕ

ರಬಕವಿ/ಬನಹಟ್ಟಿ: ಸಮಾಜಕ್ಕೆ ಕಂಟಕವಾಗಿರುವ ದೇವದಾಸಿ ಪದ್ಧತಿ ನಿರ್ಮೂಲನೆಗೆ ಪ್ರತಿಯೊಬ್ಬರೂ ಪಣ ತೊಡಬೇಕೆಂದು ಹಿರಿಯ ಸಿವಿಲ್ ನ್ಯಾಯಾಧೀಶ ಕಿರಣಕುಮಾರ ವಡಗೇರಿ ಹೇಳಿದರು.

ರಬಕವಿ ಬನಹಟ್ಟಿ ನಗರಗಳ ವಕೀಲರ ಭವನದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ತಾಲೂಕು ಕಾನೂನು ಸೇವಾ ಸಮಿತಿ, ಅಭಿಯೋಜನಾ ಇಲಾಖೆ ಹಾಗೂ ವಕೀಲರ ಸಂಘದ ಆಶ್ರಯದಲ್ಲಿ ಗುರುವಾರ ಆಯೋಜಿಸಿದ್ದ ರಾಷ್ಟ್ರೀಯ ಸ್ವಚ್ಛತಾ ಹಾಗೂ ದೇವದಾಸಿ ಪದ್ಧತಿ ನಿರ್ಮೂಲನೆ ಕುರಿತು ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ದೇವದಾಸಿ ಪದ್ಧತಿ ಇನ್ನೂ ಇರುವದು ಆಶ್ಚರ್ಯ ಮೂಡಿಸುತ್ತಿದೆ. ಈ ಅನಿಷ್ಠ ಪದ್ಧತಿ ನಿರ್ಮೂಲನೆಗೆ ಸರ್ಕಾರ ಹಲವು ಕಾನೂನು ಜಾರಿಗೆ ತಂದಿದೆ. ಅವುಗಳ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು. ದೇವದಾಸಿಯರಿಗೆ ಸರ್ಕಾರಿ ಸೌಲಭ್ಯಗಳು ದೊರೆಯದಿದ್ದರೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಗಮನಕ್ಕೆ ತರಬೇಕು ಎಂದರು.

ಹಿರಿಯ ನ್ಯಾಯವಾದಿ ಈಶ್ವರಚಂದ್ರ ಭೂತಿ ಮಾತನಾಡಿ, ದೇವದಾಸಿ ಪದ್ಧತಿ ನಿರ್ಮೂಲನೆಗೆ ಸರ್ಕಾರದಿಂದ ಜಾಗೃತಿ, ಆರೋಗ್ಯ ಶಿಬಿರ ನಡೆಸಲಾಗುತ್ತಿದೆ. ದೇವದಾಸಿ ಮಹಿಳೆಯರಿಗೆ ಸ್ವ ಉದ್ಯೋಗಕ್ಕೆ ಸಾಲ ಸೌಲಭ್ಯ, ಸಹಾಯ ಧನ ನೀಡಲಾಗುವುದು ಹಾಗೂ ಮಾಜಿ ದೇವದಾಸಿಯರಿಗೆ ಮಾಸಾಶನ, ವಸತಿ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ ಎಂದರು.

ಕಿರಿಯ ಶ್ರೇಣಿ ನ್ಯಾಯಾಧೀಶೆ ಟಿ.ಸಿ. ಶುಷ್ಮಾ ಅಧ್ಯಕ್ಷತೆ ವಹಿಸಿದ್ದರು. ಯೋಜನಾಧಿಕಾರಿ ಮಧು ಲೋಕಾಪುರ, ಎಂ.ಬಿ. ಮಧುರಖಂಡಿ, ಸುಮಂಗಲಾ ಹಿರೇಮನಿ, ಸಹಾಯಕ ಅಭಿಯೋಜಕಿ ಭವ್ಯ ಆರ್. ನ್ಯಾಯವಾದಿಗಳಾದ ಎಸ್.ಜಿ. ಕೌಜಲಗಿ, ಎಸ್.ಜಿ. ಸಲಬನ್ನವರ, ಎಸ್.ವಿ. ಗೊಳಸಂಗಿ, ರವೀಂದ್ರ ಸಂಪಗಾಂವಿ, ಪಿ.ಜಿ. ಪಾಟೀಲ, ಎ.ಎಸ್. ಗಾಡಬೋಲೆ, ವಿ.ಡಿ. ಭಸ್ಮೆ, ಶ್ರೀಶೈಲ ಮೋಪಗಾರ ಮತ್ತಿತರರಿದ್ದರು.