ತ್ಯಾಮಗೊಂಡ್ಲು : ಸಮುದಾಯ ಆರೋಗ್ಯ ಕೇಂದ್ರಗಳಿಗೆ ಆದ್ಯತೆ ಮೇಲೆ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಮಂಗಳವಾರ ಭೇಟಿ ನೀಡಿ, ಕೇಂದ್ರದಲ್ಲಿನ ಕ್ಷ&ಕಿರಣ, ಪ್ರಯೋಗಾಲಯ, ದಂತ ಚಿಕಿತ್ಸೆ ಟಕ ಸೇರಿ ವಿವಿಧ ವಿಭಾಗಗಳನ್ನು ಪರಿಶೀಲಿಸಿ ಮಾತನಾಡಿದರು. ಆಸ್ಪತ್ರೆಯಲ್ಲಿನ ಹಿರಿಯ ವೈದ್ಯಾಧಿಕಾರಿಗಳ ಕೊರತೆ, ಪ್ರಯೋಗಾಲಯ ವಿಭಾಗದ ವಿಸ್ತರಣೆಗೆ ಹೆಚ್ಚುವರಿ ಕಟ್ಟಡ ನಿರ್ಮಾಣ, ಖಾಲಿ ಇರುವ 8 ಡಿ ಗ್ರೂಪ್ ನೌಕರರ ಭರ್ತಿ, ರಾತ್ರಿಯ ಹೊತ್ತು ಮಹಿಳಾ ಸಿಬ್ಬಂದಿ ಸುರಕ್ಷತೆಗೆ ರಕ್ಷಣಾ ಸಿಬ್ಬಂದಿ, ಹಳೇ ಕ್ಷ&ಕಿರಣ ಯಂತ್ರದ ಬದಲು ಡಿಜಿಟಲ್ ಯಂತ್ರ, ಮರಣೋತ್ತರ ಪರೀೆಗೆ ಸಹಾಯಕರ ನೇಮಕ ಸೇರಿ ಇತರ ಮೂರು ಕೊಠಡಿಗಳ ನಿರ್ಮಾಣಕ್ಕೆ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ವೈದ್ಯಾಧಿಕಾರಿ ಡಾ.ಕೆ.ಬಿ. ವೀರೇಂದ್ರಕುಮಾರ್ ಮನವಿ ಸಲ್ಲಿಸಿದರು. ಆಸ್ಪತ್ರೆಯ ಜಾಗದಲ್ಲಿ ವೈದ್ಯರ, ದಾದಿಯರ ವಸತಿ ಗೃಹಗಳ ಸಂಕೀರ್ಣ ನಿರ್ಮಿಸಿದರೆ ಸಕಾಲಕ್ಕೆ ಆರೋಗ್ಯ ಸೇವೆ ಒದಗಿಸಲು ಅನುಕೂಲವಾಗುತ್ತದೆ ಎಂದು ಸಚಿವರ ಗಮನಕ್ಕೆ ತಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಆರ್.ಗೌಡ್ರು, ಎನ್ಡಿಎ ಸದಸ್ಯ ಪ್ರಕಾಶ್ಬಾಬು, ಆರೋಗ್ಯ ರಾ ಸಮಿತಿ ಸದಸ್ಯ ಟಿ.ಎನ್.ಪ್ರದಿಪ್, ನೆಲಮಂಗಲ ನಗರಸಭೆ ಅಧ್ಯಕ್ಷ ಎನ್.ಗಣೇಶ್, ಮಾಜಿ ಅಧ್ಯೆ ಪೂರ್ಣಿಮಾ ಸುಗ್ಗರಾಜು, ಮುಖಂಡರಾದ ವಸೀಂ, ಸಾದತ್ ಉಲ್ಲಾ ಅಖಿಲ್, ವಾಸುದೇವ್, ಕೃಷ್ಣಮೂರ್ತಿ, ಚಿಕ್ಕತಿಮ್ಮಯ್ಯ, ಟಿ.ಎನ್.ಹನುಮಂತರಾಜು, ಕೊಡಿಗೆಹಳ್ಳಿ ಗ್ರಾಪಂ ಅಧ್ಯಕ್ಷ ಅಪ್ಪಾಜಿ, ಆಸ್ಪತ್ರೆ ಸಿಬ್ಬಂದಿ ಇದ್ದರು.
ಆಂಬುಲೆನ್ಸ್ ವಾಹನ ಒದಗಿಸಿ : ಕಳೆದ 11 ತಿಂಗಳಿಂದ ಆಂಬುಲೆನ್ಸ್ ಸೇವೆಯಲ್ಲಿ ವ್ಯತ್ಯವಾಗಿದ್ದು, ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಗಳಿಗೆ ಹಲವು ಬಾರಿ ದೂರು ನೀಡಿದರೂ ಇದುವರೆಗೆ ಸರಿಪಡಿಸಿಲ್ಲ. ಹಾಗಾಗಿ ಆಸ್ಪತ್ರೆಗೆ ಕೂಡಲೇ 108 ಆಂಬುಲೆನ್ಸ್ ವಾಹನ ಒದಗಿಸಬೇಕು ಎಂದು ಗ್ರಾಮಸ್ಥರು ಸಚಿವರಿಗೆ ಮನವಿ ಮಾಡಿದರು.