ಬೇಲೂರು ತಾಲೂಕಿನ ಅಗ್ಗಡಲು ಗ್ರಾಮದಲ್ಲಿ ರಸ್ತೆ ಕಾಮಗಾರಿಗೆ ಶಾಸಕ ಎಚ್.ಕೆ.ಸುರೇಶ್ ಭೂಮಿ ಪೂಜೆ ನೆರವೇರಿಸಿದರು. ರುದ್ರೇಗೌಡ, ಮಾದೇಗೌಡ, ಅಶೋಕ್, ರುದ್ರೇಶ್, ಮಧು, ರತನ್, ಸಿ.ಎಸ್.ಪ್ರಕಾಶ್ ಇತರರಿದ್ದರು. 
ಜಿಲ್ಲೆ

ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಕ್ರಮ

ವಸಂತಕುಮಾರ್ ಬಿ

ಬೇಲೂರು: ಬೇಲೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಎಲ್ಲೆಲ್ಲಿ ಅಗತ್ಯವಿದೆಯೋ ಅಲ್ಲಿಗೆ ಮೊದಲ ಆದ್ಯತೆ ಮೇಲೆ ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಶಾಸಕ ಎಚ್.ಕೆ.ಸುರೇಶ್ ಹೇಳಿದರು.

ತಾಲೂಕಿನ ಗೆಂಡೇಹಳ್ಳಿ ಸಮೀಪದ ಅಗ್ಗಡಲು ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯಿಂದ 30 ಲಕ್ಷ ರೂ. ವೆಚ್ಚದಲ್ಲಿ ಬೇಲೂರು ರಸ್ತೆಯಿಂದ ಯಮಸಂಧಿ ಮಾರ್ಗವಾಗಿ ಹಗ್ಗಡಲು-ಅಡುಮನಹಳ್ಳಿ ಸೇರುವ ಸಂಪರ್ಕ ರಸ್ತೆ ಮತ್ತು 1.4 ಮೀಟರ್ ಮೋರಿ ನಿರ್ಮಾಣಕ್ಕೆ ಶನಿವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಕ್ಷೇತ್ರದಲ್ಲಿನ ವಿವಿಧ ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಹಲವು ಯೋಜನೆಗಳಲ್ಲಿ ಅನುದಾನ ತರುತ್ತಿದ್ದು, ಅದು ಸರಿಯಾಗಿ ಸದ್ಬಳಕೆಯಾಗಬೇಕು. ಗುತ್ತಿಗೆದಾರರು ಮಾಡುವ ಕೆಲಸ ಗುಣಮಟ್ಟದಿಂದ ಕೂಡಿರಬೇಕು. ಶಾಸಕರ ನಿಧಿಯಲ್ಲಿ ಬರುವ ಅನುದಾನದಲ್ಲಿ ಸಾಕಷ್ಟು ಹಣವನ್ನು ಗ್ರಾಮಗಳ ಅಭಿವೃದ್ಧಿಗೆ ಬಳಸಿದ್ದೇನೆ. ಕಾರಣ ಬೇಲೂರು ತಾಲೂಕಿನ ಗ್ರಾಮಗಳು ಸುಂದರವಾಗಿರಬೇಕು. ರಸ್ತೆ, ಚರಂಡಿ, ಸಮುದಾಯ ಭವನ, ಶಾಲಾ ಕಟ್ಟಡಗಳ ನಿರ್ಮಾಣಕ್ಕೆ ಮೊದಲ ಆದ್ಯತೆ ನೀಡಲಾಗಿದೆ ಎಂದರು. ಮುಖಂಡರಾದ ರುದ್ರೇಗೌಡ, ಮಾದೇಗೌಡ, ಅಶೋಕ್, ರುದ್ರೇಶ್, ಮಧು, ರತನ್, ಸಿ.ಎಸ್.ಪ್ರಕಾಶ್ ಇತರರು ಇದ್ದರು.