ಜಿಲ್ಲೆ

ಪುತ್ರಿ ಮೇಲೆ ಅತ್ಯಾಚಾರಗೈದ ಮಲತಂದೆ ಸೆರೆ

Dakshina Kannada

ಬಂಟ್ವಾಳ: ಇಲ್ಲಿನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ತುಂಬೆ ಎಂಬಲ್ಲಿ ಅಪ್ರಾಪ್ತ ವಯಸ್ಸಿನ ಮಗಳ ಮೇಲೆ ಅತ್ಯಾಚಾರಗೈದು ಗರ್ಭಿಣಿಯಾಗಿಸಿದ ಆಕೆಯ ಮಲತಂದೆ, ತುಂಬೆ ನಿವಾಸಿಯನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿ ದೇವಸ್ಥಾನವೊಂದರಲ್ಲಿ ಪುರೋಹಿತ ವೃತ್ತಿ ಮಾಡುತ್ತಿದ್ದು, ಬಾಲಕಿ ಮೇಲೆ ಹಲವು ತಿಂಗಳಿನಿಂದ ನಿರಂತರವಾಗಿ ಅತ್ಯಾಚಾರ ಮಾಡುತ್ತಿದ್ದನು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಬಾಲಕಿಯ ತಂದೆ ಅಪಘಾತದಲ್ಲಿ ಮರಣ ಹೊಂದಿದ ನಂತರ ಬಾಲಕಿಯ ತಾಯಿ ಆರೋಪಿಯನ್ನು ಎರಡನೇ ಮದುವೆಯಾಗಿದ್ದು, ಬಾಲಕಿ ಇವರ ಜತೆ ವಾಸವಾಗಿದ್ದಳು. ಪ್ರಸ್ತುತ ಬಾಲಕಿ 4 ತಿಂಗಳ ಗರ್ಭಿಣಿಯಾಗಿದ್ದಾಳೆ.