ಜಿಲ್ಲೆ

ಅಣಪೂರಿನಲ್ಲಿ ದೇಗುಲದ ಹುಂಡಿ ಕಳವು

ಚನ್ನಗಿರಿ: ತಾಲೂಕು ಅಣಪೂರು ಗ್ರಾಮದ ಶ್ರೀ ಚೌಡಮ್ಮ ದೇವಸ್ಥಾನದ ಹುಂಡಿಯನ್ನು ಬುಧವಾರ ರಾತ್ರಿ ಕಳವು ಮಾಡಲಾಗಿದೆ.
ದೇವಸ್ಥಾನದಿಂದ ಹುಂಡಿ ಕದ್ದೊಯ್ದ ಕಳ್ಳರು ಅದರಲ್ಲಿದ್ದ ಹಣ ತೆಗೆದುಕೊಂಡು ಹುಂಡಿಯನ್ನು ಬಿಲ್ಲಹಳ್ಳಿ ಗ್ರಾಮದ ಹೊರವಲಯದಲ್ಲಿ ಎಸೆದು ಹೋಗಿದ್ದಾರೆ. ಎಂದಿನಂತೆ ದೇಗುಲದ ಅರ್ಚಕರು ದೇವಿಗೆ ಪೂಜೆ ಸಲ್ಲಿಸಲು ಬಂದಾಗ ವಿಷಯ ತಿಳಿದಿದೆ. ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.