ಬಳ್ಳಿಗೇರಿಯಲ್ಲಿ ಕಳ್ಳತನ ತಡೆಗಟ್ಟುವ ನಿಟ್ಟಿನಲ್ಲಿ ಗ್ರಾಮಸ್ಥರಿಗೆ ಜಾಗೃತಿ ಮೂಡಿಸಲು ಡಂಗುರ ಸಾರಲಾಯಿತು. ಬಾಳಪ್ಪ ಚಳ್ಳಿಕೇರಿ, ಶೇಖರ ದೊಡ್ಡಮನಿ ಇತರರಿದ್ದರು. 
ಜಿಲ್ಲೆ

ಮನೆಬಿಟ್ಟು ತೆರಳದಂತೆ ಡಂಗುರ

ಕೊಕಟನೂರ: ಅಥಣಿ ತಾಲೂಕಿನಾದ್ಯಂತ ಹೆಚ್ಚುತ್ತಿರುವ ಕಳ್ಳತನ ಪ್ರಕರಣ ತಡೆಗಟ್ಟಲು ಅಥಣಿ ಪೊಲೀಸ್ ಠಾಣೆ ವತಿಯಿಂದ ಬಳ್ಳಿಗೇರಿ ಗ್ರಾಮದಲ್ಲಿ ಗ್ರಾಮಸ್ಥರಿಗೆ ಜಾಗೃತಿ ಮೂಡಿಸಲು ಭಾನುವಾರ ಡಂಗುರ ಸಾರಲಾಯಿತು.

ಪೊಲೀಸ್ ಸಿಬ್ಬಂದಿ ಬಾಳಪ್ಪ ಚಳ್ಳಿಕೇರಿ ಮಾತನಾಡಿ, ಮನೆಗೆ ಬೀಗ ಹಾಕಿ ಬೇರೆ ಗ್ರಾಮ ಹಾಗೂ ಪಟ್ಟಣಗಳಿಗೆ ತೆರಳುವಾಗ ಎಚ್ಚರ ವಹಿಸಬೇಕು. ಗ್ರಾಮದಲ್ಲಿ ಮುಖ ಪರಿಚಯವಿಲ್ಲದ ಹಾಗೂ ಶಂಕಾಸ್ಪದ ವ್ಯಕ್ತಿಗಳು ಕಂಡುಬಂದರೆ ತಕ್ಷಣ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಪೊಲೀಸರ ಮಾರ್ಗದರ್ಶನವಿಲ್ಲದೆ ಯಾರೂ ಗ್ರಾಮ ಬಿಟ್ಟು ಹೋಗಬಾರದು ಎಂದು ಎಚ್ಚರಿಕೆ ನೀಡಿದರು. ಪೊಲೀಸ್ ಸಿಬ್ಬಂದಿ ಬಾಳಪ್ಪ ಚಳ್ಳಿಕೇರಿ, ಶೇಖರ ದೊಡ್ಡಮನಿ, ಸಂಜಯ ಬಡಚಿ, ಅಶೋಕ ದೊಡಮನಿ, ರಮೇಶ ಹೊನಖಾಂಡೆ ಇತರರು ಉಪಸ್ಥಿತರಿದ್ದರು.