ಅರಟಾಳ: ತನು, ಮನ, ಧನದ ಸಹಕಾರದಿಂದ ಎಲ್ಲರೂ ಒಟ್ಟಾಗಿ ಹನುಮಾನ ದೇವರ ಜಾತ್ರೆ ಆಚರಿಸಿಕೊಂಡು ಬಂದಿದ್ದೇವೆ. ಹನುಮ ದೇವರಲ್ಲಿ ಭಕ್ತಿಯಿಟ್ಟು ನಡೆದರೆ ಜೀವನ ಸುಖವಾಗಿರುತ್ತದೆ ಎಂದು ಮಾಜಿ ಸುಬೇದಾರ ಮೇಜರ್ ಶ್ರೀಶೈಲ ಬಿರಾದಾರ ಹೇಳಿದರು.
ಸಮೀಪದ ಬಾಡಗಿ ಗ್ರಾಮದಲ್ಲಿ ಶ್ರೀ ಹನುಮಾನ ದೇವರ ಜಾತ್ರಾ ಮಹೋತ್ಸವ ನಿಮಿತ್ತ ಶನಿವಾರ ಹಮ್ಮಿಕೊಂಡಿದ್ದ ಓಟದ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿ, ಯುವಜನಾಂಗ ದುಶ್ಚಟಗಳಿಂದ ದೂರ ಉಳಿಯಬೇಕು ಎಂದರು.
ಓಟದ ಸ್ಪರ್ಧೆಯಲ್ಲಿ ಬಡಚಿ ಗ್ರಾಮದ ಶಿವಾನಂದ ನಾಯಿಕ ಪ್ರಥಮ, ಹನುಮಂತ ನಾಯಿಕ ದ್ವಿತೀಯ, ಅರಟಾಳದ ಅಜಿತ್ ದಮಡಿ ತೃತೀಯ, ಬಾಡಗಿಯ ಸದಾಶಿವ ನಾಟೀಕರ ಚತುರ್ಥ ಹಾಗೂ ಶಿವನಂದ ಗಾಂಜಿ ಐದನೇ ಸ್ಥಾನ ಪಡೆದುಕೊಂಡರು.
ಹಿರಿಯರಾದ ಸತ್ಯಪ್ಪ ಬಿರಾದಾರ, ಸಾಬು ತೇಲಿ, ಶಿವಗೊಂಡ ಬಿರಾದಾರ, ಬಸಪ್ಪ ಬಿಜ್ಜರಗಿ, ಮಾಜಿ ಸೈನಿಕರಾದ ಅಶೋಕ ಮುಧೋಳ, ಬಸಪ್ಪ ಕಾಗವಾಡ, ಅಣ್ಣಪ್ಪ ಕಾಗವಾಡ, ಮಲ್ಲು ಬಿಳ್ಳೂರ, ಗುಂಡು ಬಿರಾದಾರ, ಈರಪ್ಪ ಮೇಲಕೋಟೆ, ಶಿವರಾಯ ಮಾದರ, ನೀಲಪ್ಪ ಹಿರಗೊಂಡ, ಸಿದ್ದಪ್ಪ ಮಮದಾಪುರ, ಸಂಗಮೇಶ ಉಮರಾಣಿ, ಸಂಗಮೇಶ ಹಿಪ್ಪರಗಿ, ರಾಜು ಚಮಕೇರಿ, ರಾಮು ಜಂಬಗಿ, ಸದಾಶಿವ ನಾಟೀಕರ ಇತರರಿದ್ದರು.