ಗೊಳಸಂಗಿಯಲ್ಲಿ ಮುಸ್ಲಿಂ ಸಮುದಾಯದವರು ರಂಜಾನ್ ನಿಮಿತ್ತ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ತಜಮುಲಖಾದ್ರಿಸಾಹೇಬ ಜಾಗೀರದಾರ, ಮಹಿಬೂಬ ಹತ್ತರಕಿಹಾಳ, ಬಂದೇನವಾಜ್ ಡೋಲಚಿ ಇತರರಿದ್ದರು. 
ಜಿಲ್ಲೆ

ನಕಾರಾತ್ಮಕ ಕೃತ್ಯಗಳಿಂದ ದೂರವಿರುವುದೇ ರಂಜಾನ್

ಗೊಳಸಂಗಿ: ಗಾಸಿಪ್, ಚಾಡಿಮಾತು, ಸುಳ್ಳುಸುದ್ದಿ ಅಥವಾ ಯಾವುದೇ ನಕಾರಾತ್ಮಕ ಕೃತ್ಯಗಳನ್ನು ತಪ್ಪಿಸುವ ಮೂಲಕ ದೈಹಿಕವಾಗಿ, ಆಧ್ಯಾತ್ಮಿಕವಾಗಿ ತಮ್ಮನ್ನು ತಾವು ತರಬೇತಿ ಮಾಡಿಕೊಳ್ಳುವ ಸಮಯವನ್ನೇ ರಂಜಾನ್ ಎನ್ನುತ್ತಾರೆ ಎಂದು ಇಸ್ಲಾಂ ಧರ್ಮಗುರು ಮೌಲಾನಾ ಅಬ್ದುಲ್‌ಖಾದರ್ ಕಾಚಾಪುರ ಹೇಳಿದರು.

ಸ್ಥಳೀಯ ಹಳೆಯ ರಾಷ್ಟ್ರೀಯ ಹೆದ್ದಾರಿ-30ರ ಬಳಿಯ ಮುಸಲ್ಮಾನ್ ಬಾಂಧವರ ಈದ್ಗಾ ಮೈದಾನದಲ್ಲಿ ರಂಜಾನ್ ಹಬ್ಬದ ಕುರಿತು ಸೋಮವಾರ ನಡೆದ ಸಾಮೂಹಿಕ ಪ್ರಾರ್ಥನೆ ವೇಳೆ ಅವರು ಆಶೀರ್ವಚನ ನೀಡಿದರು.

ಉಪವಾಸದ ಅಂತಿಮ ಗುರಿ ದೇವಪ್ರಜ್ಞೆ ಪಡೆಯುವುದಾಗಿದೆ. ಇದು ದೇವರ ನಿರಂತರ ಅರಿವಿನ ಸ್ಥಿತಿ ಸೂಚಿಸುತ್ತದೆ ಎಂದರು. ಮೌಲಾನಾ ರ್ಇಾನ್ ಇಮಾಮತ್ ಮಾಡಿದರು. ಮುಫ್ತಿ ಉಮ್ಮರ್ ಾರೂಕ್, ಮೌಲಾನಾ ಇಮ್ತಿಯಾಜ್ ದುವಾ ಮಾಡಿದರು.

ಪ್ರಮುಖರಾದ ತಜಮುಲಖಾದ್ರಿಸಾಹೇಬ ಜಾಗೀರದಾರ, ಮಹಿಬೂಬ ಹತ್ತರಕಿಹಾಳ, ಬಂದೇನವಾಜ ಡೋಲಚಿ, ಗೂಡುಸಾಬ ಜಮಾದಾರ, ಬಂದೇನವಾಜ ಬಿಜಾಪುರ, ಲಾಲಸಾಬ ಹುಣಶಾಳ, ಗೈಬುಸಾಬ ಕಂಕರಪೀರ, ದಾದಾಪೀರ ಪಟೇವಾಲೆ, ಸಾಹೇಬಲಾಲ ಕಮತಗಿ, ಲಾಲಸಾಬ ಹತ್ತರಕಿಹಾಳ, ಅಲ್ಲಾಭಕ್ಷ ಭಾಗವಾನ, ಅಬೂಬಕರ ಬಿಜಾಪುರ, ಮಹ್ಮದ್‌ಉಮ್ಮರ ಹತ್ತರಕಿಹಾಳ ಇತರರಿದ್ದರು.