ಜಿಲ್ಲೆ

ಮೊಬೈಲ್‌ನಿಂದ ದೂರವಿರಿ ‘ಗ್ರಾಮೀಣ ಕ್ರೀಡೆಗೆ ಆದ್ಯತೆ ನೀಡಿ‘

ಡಂಬಳ: ಪ್ರಾಚೀನ ಗ್ರಾಮೀಣ ಆಟಗಳು ಮನುಷ್ಯನನ್ನು ದೈಹಿಕ ಮತ್ತು ಮಾನಸಿಕವಾಗಿ ಸದೃಢಗೊಳಿಸುತ್ತಿದ್ದವು. ಇತ್ತೀಚಿಗೆ ಗ್ರಾಮೀಣ ಕ್ರೀಡೆಗಳು ನೇಪಥ್ಯಕ್ಕೆ ಸರಿಯುತ್ತಿದ್ದು ಮೊಬೈಲ್ ಫೋನ್‌ಗಳಲ್ಲೇ ಆಟವಾಡುವುದು ಹೆಚ್ಚಾಗಿದೆ. ಪರಿಣಾಮ ಮಕ್ಕಳಲ್ಲಿ ಕಾಯಿಲೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ ಎಂದು ಸಿಆರ್‌ಪಿ ಎನ್.ಎಂ ಕುಕನೂರ ಹೇಳಿದರು.

ಮೇವುಂಡಿ ಗ್ರಾಮದ ಶ್ರೀಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಸಮಾರಂಭದಲ್ಲಿ ಅವರು ಮಾತನಾಡಿದರು. ‘ವಿದ್ಯಾರ್ಥಿಗಳು ಮೊಬೈಲ್ ಬಳಕೆಯಿಂದ ದೂರವಿರಬೇಕು. ಗ್ರಾಮೀಣ ಕ್ರೀಡೆಗಳಿಗೆ ಆದ್ಯತೆ ನೀಡಬೇಕು’ ಎಂದರು.

ಮಕ್ಕಳು ಗ್ರಾಮೀಣ ಆಟಗಳಾದ ಆಣೆಕಲ್ಲು, ಕೋಲಿನ ಆಟ, ಕುಂಟೆ ಬಿಲ್ಲೆ, ಕಣ್ಣಾ ಮುಚ್ಚಾಲೆ, ಲಗೋರಿ, ಬುಗುರಿ, ಮುಟ್ಟಾಟ, ಚಿಣಿ-ಪಣಿ, ಹುಲಿ ಮನಿ, ಲಡ್ಡು ಲಡ್ಡು ತಿಮ್ಮಯ್ಯ, ಬಳೆಚೂರಿನ ಆಟ, ಅತ್ತಿ ಕಟ್ಟಿಗೆ ಬತ್ತಿಕಟ್ಟಿಗೆ ಇತರ ಆಟಗಳನ್ನಾಗಿ ಸಂಭ್ರಮಿಸಿದರು.

ಶಿಕ್ಷಕಿ ಕವಿತಾ ಪಾರಪ್ಪನವರ, ನಿಂಗಮ್ಮ ನೊಟಗಾರ, ಸವಿತಾ ಡೊಣ್ಣಿ, ನಾಗರತ್ನಾ ಪಾಟೀಲ, ವೀಣಾ ತಾಂಬ್ರಗುಂಡಿಮಠ, ಮೀನಾಕ್ಷಿ ಹಿರೇಮಠ, ಪುಷ್ಪಾ ಮಲ್ಲಾರ್ಜಿ, ವಿಜಯಲಕ್ಷ್ಮೀ ಪಾಟೀಲ, ಲತಾ ಬಂಡಿವಡ್ಡರ, ದೇವಮ್ಮ ಕರದಾನಿ, ಕವಿತಾ ಕರವೀರಮಠ ಇತರರಿದ್ದರು.