ಜಿಲ್ಲೆ

ಮಾದಕ ವಸ್ತುಗಳ ಸೇವನೆಯಿಂದ ದೂರವಿರಲಿ

ಬಸವರಾಜ ವೀರಪ್ಪ ಗರಗ

ಹಳಿಯಾಳ: ರಕ್ತದಾನ ಶ್ರೇಷ್ಟದಾನವಾಗಿದ್ದು, ರಕ್ತದಾನದಿಂದ ಜೀವವನ್ನು ಉಳಿಸಬಹುದಾಗಿದೆ. ವಿದ್ಯಾರ್ಥಿಗಳು ಮಾದಕ ವಸ್ತುಗಳ ಸೇವನೆಯಿಂದ ದೂರ ಇರಬೇಕು ಎಂದು ಹುಬ್ಬಳ್ಳಿಯ ನವನಗರದ ಪದ್ಮಶ್ರೀ ಆರ್.ಬಿ. ಪಾಟೀಲ ಕ್ಯಾನ್ಸರ್ ಹಾಸ್ಪಿಟಲ್​ನ ಡಾ. ಉಮೇಶ ಹಳ್ಳಿಕೇರಿ ಹೇಳಿದರು.

ಸರ್ ಎಂ. ವಿಶ್ವೇಶ್ವರಯ್ಯನವರ ಜನ್ಮದಿನದ ಪ್ರಯುಕ್ತ ಪಟ್ಟಣದ ಕೆಎಲ್​ಎಸ್ ವಿಡಿಐಟಿ ಮಹಾವಿದ್ಯಾಲಯದಲ್ಲಿ ಸೋಮವಾರ ಆಯೋಜಿಸಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು, ಶಿಕ್ಷಕರು ಸೇರಿದಂತೆ 80ಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದರು. ಪ್ರಾಚಾರ್ಯ ಡಾ. ವಿ.ಎ. ಕುಲಕರ್ಣಿ, ಪೊ›. ಮಂಜುನಾಥ, ವಿಆರ್​ಡಿಎಂ ಟ್ರಸ್ಟ್​ನ ಆಡಳಿತಾಧಿಕಾರಿ ಪ್ರಕಾಶ ಪ್ರಭು, ಪೊ›. ಸಂತೋಷ ಸವಣೂರ, ಪೊ›. ಜ್ಯೋತಿ ಕಮ್ಮಾರ ಇತರರಿದ್ದರು.