ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ
ಪೋರ್ಚುಗೀಸರ ವಿರುದ್ಧ ಸಾಧಿಸಿದ ಪ್ರಥಮ ನೌಕಾ ಸಮರ ವಿಜಯದ ಅಂಗವಾಗಿ ಬಸ್ರೂರಿನಲ್ಲಿ ನಡೆಯಲಿರುವ ಬಸ್ರೂರು ಸ್ವಾತಂತ್ರೃ ದಿನ ಮಹೋತ್ಸವ ಕಾರ್ಯಕ್ರಮ ಅಂಗವಾಗಿ ಶಿವಾಜಿ ಪುತ್ಥಳಿಯನ್ನು ಗಂಗೊಳ್ಳಿಯಿಂದ ದೋಣಿಗಳ ಮೂಲಕ ನದಿ ಮಾರ್ಗವಾಗಿ ಬಸ್ರೂರಿನ ಮಂಡಿಕೇರಿಯ ಹೊಳೆಬಾಗಿಲಿಗೆ ಗುರುವಾರ ಕೊಂಡೊಯ್ಯಲಾಯಿತು.
ಗಂಗೊಳ್ಳಿ ಹಿಂದು ಜಾಗರಣ ವೇದಿಕೆ, ವಿವಿಧ ಹಿಂದುಪರ ಸಂಘಟನೆ ಕಾರ್ಯಕರ್ತರು, ದೇಶಾಭಿಮಾನಿಗಳು ಗಂಗೊಳ್ಳಿಯ ಉಪ್ಪಿನಕುದ್ರು ಕಳುವಿನ ಬಾಗಿಲು ಶನೀಶ್ವರ ದೇವಸ್ಥಾನ ಬಳಿಯಿಂದ ದೋಣಿಗಳ ಮೂಲಕ ಶಿವಾಜಿ ಪುತ್ಥಳಿಯನ್ನು ನದಿ ಮಾರ್ಗವಾಗಿ ಬಸ್ರೂರಿನ ಮಂಡಿಕೇರಿ ಹೊಳೆಬಾಗಿಲಿಗೆ ಕೊಂಡೊಯ್ದರು.
ಡಾ.ಸಂದೀಪ್ ಮಹೀಂದ್ ಮಾತನಾಡಿ, ಪೋರ್ಚುಗೀಸ್, ಡಚ್ಚರ ವಿರುದ್ಧ ಶಿವಾಜಿ ಮಹಾರಾಜರ ಐತಿಹಾಸಿಕ ವಿಜಯದ ಸ್ಮರಣೆಗಾಗಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ಹೇಳಿದರು.
ಗಂಗೊಳ್ಳಿ ಹಿಂದು ಜಾಗರಣ ವೇದಿಕೆ ಮುಖಂಡರಾದ ವಾಸುದೇವ ದೇವಾಡಿಗ, ಶ್ರೀಧರ ನಾಯ್ಕ, ರತ್ನಾಕರ ಗಾಣಿಗ, ಸವಿತಾ ದೇವಾಡಿಗ, ಮಣಿಕಂಠ ಖಾರ್ವಿ, ಶೋಭಾ ಜಿ.ಪುತ್ರನ್, ವಿವಿಧ ಹಿಂದು ಪರ ಸಂಘಟನೆ ಕಾರ್ಯಕರ್ತರು, ವಿವಿಧ ಸಂಘ-ಸಂಸ್ಥೆ ಸದಸ್ಯರು, ಕೊಲ್ಲಾಪುರ ಮತ್ತು ಪುಣೆಯ ಶಿವಾಜಿ ಅಭಿಮಾನಿಗಳು ಉಪಸ್ಥಿತರಿದ್ದರು.