ಜಿಲ್ಲೆ

ಪುತ್ಥಳಿ ಶಂಕುಸ್ಥಾಪನೆಗೆ ಭೂಮಿಪೂಜೆ ನಾಳೆ

ರುದ್ರಪ್ಪ ವಾಲಿ

ಹಗರಿಬೊಮ್ಮನಹಳ್ಳಿ: ಪಟ್ಟಣದ ರಾಮನಗರದ ಬಸ್ ತಂಗುದಾಣದ ವ್ಯಾಪ್ತಿಯ ಗ್ರಂಥಾಲಯದ ಮುಂದೆ ಅಂಬೇಡ್ಕರ್ ಅವರ ಪುತ್ಥಳಿ ಸ್ಥಾಪನೆ ನಿಮಿತ್ತ ಏ.14ರಂದು ಭೂಮಿಪೂಜೆ ನಡೆಯಲಿದೆ ಎಂದು ಡಾ.ಬಿ.ಆರ್.ಅಂಬೇಡ್ಕರ್ ಸಂಘದ ತಾಲೂಕು ಅಧ್ಯಕ್ಷ ಗದ್ದಿಕೆರೆ ಎಚ್.ದೊಡ್ಡಬಸಪ್ಪ ತಿಳಿಸಿದ್ದಾರೆ.

ಪಟ್ಟಣದ ಚಿಂತ್ರಪಳ್ಳಿಯಲ್ಲಿ ಇತ್ತೀಚೆಗೆ ಕರೆಯಲಾಗಿದ್ದ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿ, ಜಯಂತಿಯಂದು ಆಯಾ ಗ್ರಾಮಗಳಲ್ಲಿ ಸರಳ ಪೂಜೆಯೊಂದಿಗೆ ವಿವಿಧ ಕಲಾ ತಂಡ ಕಟ್ಟಿಕೊಂಡು ತಾಲೂಕು ಕೇಂದ್ರಕ್ಕೆ ಬರಬೇಕು.

ಶಾಸಕ ಕೆ.ನೇಮಿರಾಜ ಚಾಲನೆ ನೀಡಲಿದ್ದು, ನಂತರ ಮೆರವಣಿಗೆ ನಡೆಯಲಿದೆ ಎಂದು ತಿಳಿಸಿದ್ದಾರೆ. ಛಲವಾದಿ ಸಮಾಜದ ತಾಲೂಕು ಅಧ್ಯಕ್ಷ ಕಾಹಳೆ ಬಸವರಾಜ, ಪ್ರಮುಖರಾದ ವೈ.ಮರಿಯಪ್ಪ, ಎಂ.ಮಹೇಶ, ಅಲಬೂರು ಮರಿಯಪ್ಪ, ಹೆಗ್ಡಾಳ ಪರುಶುರಾಮ, ಆನಂದ ದೇವನಹಳ್ಳಿ ಪ್ರಭು ಇತರರಿದ್ದರು.