ಜಿಲ್ಲೆ

ಮೊಬೈಲ್ ಮುಟ್ಟಿಸಿದ ಪ್ರಾಧ್ಯಾಪಕ

Belagavi

ಬೆಳಗಾವಿ: ನಗರದಲ್ಲಿ ಮೊಬೈಲ್ ಕಳೆದುಕೊಂಡಿದ್ದ ಮಹಾರಾಷ್ಟ್ರ ಕೊಲ್ಲಾಪುರ ಜಿಲ್ಲೆಯ ಖಾಸಗಿ ಕಂಪನಿಯ ಉದ್ಯೋಗಿಗೆ ಜೈನ ಕಾಲೇಜ್‌ನ ಪ್ರಾಧ್ಯಾಪಕ ಭರಮು ಕೋಳೇಕರ್ ಅವರು ಟಿಳಕವಾಡಿ ಠಾಣೆ ಪೊಲೀಸರ ಮೂಲಕ ಮೊಬೈಲ್ ಮುಟ್ಟಿಸಿ ಮಾನವೀಯತೆ ಮೆರೆದಿದ್ದಾರೆ.

ಬೆಳಗಾವಿ ನಗರದಲ್ಲಿರುವ ಸಂಬಂಧಿಕರ ಮನೆಗೆ ಕೊಲ್ಲಾಪುರ ಜಿಲ್ಲೆಯ ಕಾಗಲ ತಾಲೂಕಿನ ಹುಪರಿಯ ಮಹಾದೇವ ಚಂದ್ರಶೇಖರ ನಾಯ್ಕ ಬುಧವಾರ ಆಗಮಿಸಿದ್ದರು. ಈ ವೇಳೆ ಟಿಳಕವಾಡಿ ಗೋಮಟೇಶ ಮಹಾವಿದ್ಯಾಲಯದ ಬಳಿ ಮೊಬೈಲ್ ಬಿದ್ದಿತ್ತು.

ಇದನ್ನು ಗಮನಿಸಿದ ಪ್ರಾಧ್ಯಾಪಕ ಭರಮು ಕೋಳೇಕರ್, ತಮ್ಮ ಸಿಬ್ಬಂದಿ ಮೂಲಕ ಪೊಲೀಸರ ಗಮನಕ್ಕೆ ತಂದಿದ್ದರು. ಬಳಿಕ ಮೊಬೈಲ್ ಕಳೆದುಕೊಂಡಿದ್ದ ಉದ್ಯಮಿಯನ್ನು ಪತ್ತೆ ಹಚ್ಚಿ ಮೊಬೈಲ್ ಮುಟ್ಟಿಸಿದ್ದೇವೆ ಎಂದು ಟಿಳಕವಾಡಿ ಠಾಣೆ ಎಎಸ್‌ಐ ಎಂ.ಪಿ. ಶಿಂಧೆ ತಿಳಿಸಿದ್ದಾರೆ.