ಸಿರಿಗೇರಿ: ಸ್ಥಳೀಯ ಪೊಲೀಸ್ ಠಾಣೆ ಮಾದರಿ ಪುರಸ್ಕಾರಕ್ಕೆ ಆಯ್ಕೆಯಾದ ಹಿನ್ನೆಲೆಯಲ್ಲಿ ಕೇಂದ್ರ ಪರಿಶೀಲನೆ ತಂಡದ ಸದಸ್ಯ ಸೈಯ್ಯದ್ ಹುಸೇನ್ ಭೇಟಿ ನೀಡಿ ಬುಧವಾರ ಪರಿಶೀಲಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎರಡು ವರ್ಷಗಳಲ್ಲಿ ಠಾಣೆಯಲ್ಲಿ ನಡೆದ ಸಾಧಕ, ಬಾಧಕಗಳ ವಿವರಣೆ ಪಡೆಯಲಾಗಿದೆ. ಹಳೆಯ ಕಟ್ಟಡದಿಂದ ಹೊಸ ಕಟ್ಟಡಕ್ಕೆ ಠಾಣೆ ಮಾರ್ಪಾಡಾಗಿರುವ ಮಾಹಿತಿ ಮತ್ತು ಸಾರ್ವಜನಿಕರಿಂದ ಪಡೆದ ಸಲಹೆಗಳನ್ನು ಪಟ್ಟಿ ಮಾಡಿ ಕೇಂದ್ರಕ್ಕೆ ಮಾಹಿತಿ ನೀಡಲಾಗುವುದು ಎಂದರು.
ಠಾಣೆಯ ಗ್ರಂಥಾಲಯ, ಉಪಹಾರ ಕೊಠಡಿ, ಕಾನ್ಫರೆನ್ಸ್ ಹಾಲ್, ವಿಶ್ರಾಂತಿ ಕೊಠಡಿ, ಬ್ರೀಫ್ ರೂಮ್, ಬಂಧಿ ಕೋಣೆ, ಮದ್ದು ಬಂದೂಕುಗಳ ಕೊಠಡಿ, ಸಾರ್ವಜನಿಕರ ವೇಟಿಂಗ್ ಹಾಲ್, ಮಹಿಳಾ ಮತ್ತು ಮಕ್ಕಳ ಸಹಾಯವಾಣಿ ಕೊಠಡಿ, ಶೌಚಗೃಹ, ಪಾರ್ಕ್, ಮೈದಾನ, ಗೋಡೆಗಳ ಮೇಲೆ ಅಪಘಾತಗಳ ಕುರಿತ ಜಾಗೃತಿ ಭಿತ್ತಿಚಿತ್ರಗಳನ್ನು ವೀಕ್ಷಿಸಿದರು.
ಪ್ರಮುಖರಾದ ಸಿ.ಎಂ.ನಾಗರಾಜಸ್ವಾಮಿ, ಎಸ್.ಎಂ.ಅಡಿವೆಯ್ಯ ಸ್ವಾಮಿ, ಡ್ರೈವರ್ ಹುಲುಗಪ್ಪ, ರಾರಾವಿ ವೆಂಕಟೇಶ, ಬಕಾಡೆ ಈರಯ್ಯ, ವೀರನಗೌಡ, ವಿ.ಶೇಖರ್, ಆಟೋ ತಿಮ್ಮಯ್ಯ, ಗುಂಡಿಗನೂರು ಪಂಪನಗೌಡ, ನಾಗರುದ್ರಗೌಡ, ನಾಗರಾಜ, ಶರಣಗೌಡ, ಮಾರೇಶ್, ಬಿ ಉಮೇಶ್, ಸುಂಕಪ್ಪ ಇತರರಿದ್ದರು.