ಜಿಲ್ಲೆ

ಅಲ್ಪಸಂಖ್ಯಾತ ಸಿಎಂ,ಎಚ್‌ಡಿಕೆ ಹೇಳಿಕೆಗೆ ಪ್ರತಿಕ್ರಿಯಿಸಲಾರೆ

Chitradurga

ಚಿತ್ರದುರ್ಗ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ಗೆ ಬಹುಮತ ಬಂದರೆ ಅಲ್ಪಸಂಖ್ಯಾತರೊಬ್ಬರನ್ನು ಮುಖ್ಯಮಂತ್ರಿಯನ್ನಾಗಿ ಮಾಡ ಲಾಗುವುದೆಂಬ ಮಾಜಿ ಮುಖ್ಯಮಂತ್ರಿ ಹೇಳಿಕೆಗೆ ಪ್ರತಿಕ್ರಿಯಿಸುವುದಿಲ್ಲವೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದ ಮುರುಘಾ ಮಠದ ಆವರಣದ ಹೆಲಿಪ್ಯಾಡ್‌ನಲ್ಲಿ ಬುಧವಾರ ಸುದ್ದಿಗಾರರ ಜತೆ ಮಾತನಾಡಿ,ಅದು ಅವರ ಪಕ್ಷದ ನಿರ್ಣಯ, ಅದರ ಬಗ್ಗೆ ಯಾವುದೇ ಹೇಳಿಕೆ ನೀಡುವುದಿಲ್ಲ.

ಪ್ರತಿ ಮನೆಗೆ 10 ಸಾವಿರ ಲೀಟರ್ ಉಚಿತವಾಗಿ ನೀರು ಕೊಡುವ ಬಗ್ಗೆ ಇನ್ನೂ ಆಲೋಚನೆ ಮಾಡಿಲ್ಲ. ಬಿಜೆಪಿಯಲ್ಲಿ ಭಿನ್ನಮತವಿಲ್ಲ. ಮಂಡಿ ಶಸ್ತ್ರ ಚಿಕಿತ್ಸೆಯಿಂದಾಗಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಆಸ್ಪತ್ರೆಯಲ್ಲಿದ್ದಾರೆ. ಆದ್ದರಿಂದ ಅವರು ಕಾರ‌್ಯಕ್ರಮಗಳಿಗೆ ಹಾಜರಾಗುತ್ತಿಲ್ಲ ವೆಂದರು.

ಚಿತ್ರದುರ್ಗದ ಮುರುಘಾಮಠಕ್ಕೆ ಆಡಳಿತಾಧಿಕಾರಿ ನೇಮಿಸುವ ಕುರಿತಂತೆ ಜಿಲ್ಲಾಡಳಿತ ನೀಡಿರುವ ವರದಿಯನ್ನು ಕಾನೂನು ಇಲಾಖೆ ಪರಿ ಶೀಲಿಸುತ್ತಿದೆ. ಶೀಘ್ರದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದೆಂದರು. ಮುರುಘಾ ಸ್ವಾಮೀಜಿ ವಿರುದ್ಧ ಪಿತೂರಿ ನಡೆಸಿದ ಆರೋಪದಡಿ ಮಾಜಿ ಶಾಸಕ ಎಸ್.ಕೆ.ಬಸವರಾಜನ್ ಬಂಧನವಾಗಿರುವಂತೆ ಪ್ರತಿಕ್ರಿಯಿಸಿ, ಪ್ರಕರಣ ನ್ಯಾಯಾಲಯದಲ್ಲಿದೆ. ಪೊಲೀಸರು ತನಿಖೆ ಮಾಡುತ್ತಿದ್ದಾರೆ ಎಂದರು.

ಸಚಿವರಾದ ಗೋವಿಂದ ಕಾರಜೋಳ,ಬೈರತಿ ಬಸವರಾಜ್,ಶಾಸಕರಾದ ಎಂ.ಚಂದ್ರಪ್ಪ,ಜಿ.ಎಚ್.ತಿಪ್ಪಾರೆಡ್ಡಿ,ಎಂಎಲ್‌ಸಿ ಕೆ.ಎಸ್.ನವೀನ್, ಎಸ್‌ಪಿ ಕೆ.ಪರಶುರಾಮ್,ಜಿಪಂ ಸಿಇಒ ಕೆ.ದಿವಾಕರ್,ಎಡಿಸಿ ಇ.ಬಾಲಕೃಷ್ಣ ಮತ್ತಿತರ ಅಧಿಕಾರಿಗಳಿದ್ದರು. ಇದೇ ವೇಳೆ ನಾನಾ ಸಂಘಟನೆಗಳ ಪ್ರಮುಖರು ಸಿಎಂಗೆ ಮನವಿ ಸಲ್ಲಿಸಿದರು.

----