ಜಿಲ್ಲೆ

ಸೈಕಲ್​ ಮೇಲೆ ರಾಜ್ಯ ಪರ್ಯಟನೆ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಮಂತ್ರಿ ಆಗಲಿ ಎಂದು ಬಯಸಿ ಹುಬ್ಬಳ್ಳಿಯ ಯುವಕ ಸೈಕಲ್​ ಮೇಲೆ ರಾಜ್ಯ ಪರ್ಯಟನೆಗೆ ಮುಂದಾಗಿದ್ದಾರೆ.
ಹುಬ್ಬಳ್ಳಿ ತಾಲೂಕು ಮಂಟೂರು ಗ್ರಾಮದ ಯುವಕ ಭರತ ಜೈನ್​ ಈ ಕಾರ್ಯಕ್ಕೆ ಮುಂದಾಗಿದ್ದಾರೆ. ನಗರದ ಪಿ ಆ್ಯಂಡ್​ ಪಿ ಟ್ರಾವೆಲ್ಸ್​ನಲ್ಲಿ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿರುವ ಭರತ, ದೇಶ ಉಳಿಸಲು ಬಿಜೆಪಿಗೆ ಮತ ನೀಡಿ ಎಂಬ ಘೋಷ ವಾಕ್ಯದೊಂದಿಗೆ ಸೈಕಲ್​ ಸವಾರಿ ಆರಂಭಿಸಿದ್ದಾರೆ.
ನಗರದಿಂದ ಭಾನುವಾರ ಬೆಳಗ್ಗೆ 6 ಗಂಟೆಗೆ ಸೈಕಲ್​ ಸವಾರಿ ಆರಂಭಿಸಿದ ಭರತ, ದೇಶ ಉಳಿಯಲು ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು. ಇದಕ್ಕೆ ಜನರು ಬಿಜೆಪಿಗೆ ಬೆಂಬಲಿಸಬೇಕಿದೆ. ಹೀಗಾಗಿ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಯಾತ್ರೆ ಶುರು ಮಾಡಿದ್ದಾರೆ.
ನಗರದ ವಾರ್ಡ್​ 21ರ ಪೌರ ಕಾಮಿರ್ಕರು ಸೈಕಲ್​ ಸವಾರಿಗೆ ಚಾಲನೆ ನೀಡಿ ಭರತ್​ಗೆ ಶುಭ ಹಾರೈಸಿದರು. ಪಾಲಿಕೆ ಸದಸ್ಯ ಆನಂದ ಯಾವಗಲ್ಲ, ಇತರರು ಇದ್ದರು.