ಜಿಲ್ಲೆ

ನ.1ರಿಂದ ರಾಜ್ಯಮಟ್ಟದ ಸಾಫ್ಟ್‌ಬಾಲ್ ಟೂರ್ನಿ: ಅಸೋಸಿಯೇಷನ್ ಸಂಸ್ಥಾಪಕ ಅಧ್ಯಕ್ಷ ಗಂಗಾಧರ್ ರಾಜು ಮಾಹಿತಿ

ಮಂಡ್ಯ: ರಾಜ್ಯ ಸಾಫ್ಟ್‌ಬಾಲ್ ಕ್ರಿಕೆಟ್ ಅಸೋಸಿಯೇಷನ್ ವತಿಯಿಂದ ಬೆಂಗಳೂರಿನ ಆಚಾರ್ಯ ಕ್ರೀಡಾಂಗಣದಲ್ಲಿ ನ.1ರಿಂದ ಡಿ.1ರವರೆಗೆ ರಾಜ್ಯಮಟ್ಟದ ಸಾಫ್ಟ್‌ಬಾಲ್ ಪ್ರೀಮಿಯರ್ ಲೀಗ್ ನಡೆಸಲಾಗುತ್ತಿದೆ ಎಂದು ಅಸೋಸಿಯೇಷನ್ ಸಂಸ್ಥಾಪಕ ಅಧ್ಯಕ್ಷ ಗಂಗಾಧರ್ ರಾಜು ತಿಳಿಸಿದರು.

ರಾಜ್ಯಾದ್ಯಂತ 31 ಜಿಲ್ಲೆಗಳಿಂದ 699 ಆಟಗಾರರನ್ನು ಆಯ್ಕೆ ಮಾಡಿ 32 ತಂಡ ರಚಿಸಲಾಗಿದ್ದು. ಈ ಪಂದ್ಯಾವಳಿಯು ಮುಂದಿನ ಪೀಳಿಗೆಯ ಕ್ರಿಕೆಟ್ ಪ್ರತಿಭೆಗೆ ವೇದಿಯಾಗಿ ರೂಪಿಸುವ ಉದ್ದೇಶ ಹೊಂದಲಾಗಿದೆ. ಪ್ರತಿ ಪಂದ್ಯವನ್ನು 9 ಓವರ್‌ಗೆ ಸೀಮಿತಗೊಳಿಸಿದ್ದು, ರಾತ್ರಿ 7.30ರಿಂದ 9.30ರವರೆಗೆ ನಡೆಯಲಿವೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಪ್ರತಿ ತಂಡಕ್ಕೆ ತಲಾ ಆರು ಲಕ್ಷ ರೂ.ನಂತೆ ವೇತನ ನೀಡಲಾಗುತ್ತಿದೆ. ಎಲ್ಲ ಪಂದ್ಯಗಳನ್ನು ಪ್ರಸಾರ ಭಾರತಿಯಲ್ಲಿ ನೇರ ಪ್ರಸಾರ ಮಾಡಲಾಗುವುದು. ಟೂರ್ನಿಯನ್ನು ಮುಂದಿನ ಹಂತಕ್ಕೆ ತಲುಪಿಸುವ ದೃಷ್ಟಿಯಿಂದ ರಾಷ್ಟ ಮಟ್ಟದ ಪಂದ್ಯಾವಳಿಗಳಿಗೆ ಯೋಜನೆ ರೂಪಿಸಲಾಗುತ್ತದೆ. ಇದಕ್ಕಾಗಿ ರಾಜ್ಯದಿಂದ 25 ಆಟಗಾರರ ಆಯ್ಕೆ ಮಾಡಿಕೊಳ್ಳಲಾಗುವುದು ಎಂದು ವಿವರಿಸಿದರು.

ತಂಡದ ಮಾಲೀಕರಾದ ಬಾಗೇಗೌಡ, ಮೋಹನ್‌ಕುಮಾರ್, ಚನ್ನಬಸವಯ್ಯ, ರಾಜಶೇಖರ್, ಗಿರೀಶ್, ಮನು ಇದ್ದರು.