ಪ್ರವಾಹ ಸದೃಶವಾಗಿ ಹರಿಯುತ್ತಿರುವ ಕುಮಾರಧಾರಾ ನದಿ 
ಜಿಲ್ಲೆ

ಕುಮಾರಧಾರಾ ಪ್ರವಾಹದಿಂದ ರಾಜ್ಯರಸ್ತೆ ಜಲಾವೃತ

ಇಂದಿರಾ ಎನ್ ಕೆ

ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಸೇರಿದಂತೆ ಘಟ್ಟ ಪ್ರದೇಶದಲ್ಲಿ ಸುರಿದ ಭಾರಿ ಮಳೆಗೆ ಕುಮಾರಧಾರಾ ನದಿ ತುಂಬಿ ಹರಿಯುತ್ತಿದ್ದು ಸ್ನಾನಘಟ್ಟದಿಂದ ಸುಮಾರು 50 ಮೀ. ನದಿ ವ್ಯಾಪಿಸಿದೆ.

ಕುಮಾರಧಾರಾದಂತೆ ಅದರ ಉಪನದಿ ದರ್ಪಣತೀರ್ಥ ತುಂಬಿ ಹರಿಯುತ್ತಿದೆ. ಇದರಿಂದ ಮಂಜೇಶ್ವರ-ಪುತ್ತೂರು-ಸುಬ್ರಹ್ಮಣ್ಯ ಅಂತರ್‌ರಾಜ್ಯ ಹೆದ್ದಾರಿ ಜಲಾವೃತಗೊಂಡು ರಸ್ತೆ ಸಂಚಾರ ಸ್ಥಗಿತಗೊಂಡಿದೆ.