ಹುಬ್ಬಳ್ಳಿ: ರಾಜ್ಯ ರಾಜಕಾರಣದಲ್ಲಿ ಸದ್ಯಕ್ಕೇನೂ ಸಮಸ್ಯೆಯಿಲ್ಲ ಎಂದು ಕೋಡಿಮಠದ ಶ್ರೀ ಶಿವಾನಂದ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
ರಾಜಕೀಯದ ಬಗ್ಗೆ ಯುಗಾದಿ ಕಳೆದ ನಂತರ ಮಾತನಾಡುತ್ತೇನೆ. ಸದ್ಯ ಎಲ್ಲವೂ ಸರಿಯಾಗಿಯೇ ಇದೆ ಎಂದು ಹೇಳಿದ್ದಾರೆ.
ಈ ವರ್ಷ ಇನ್ನೂ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ. ಬೆಂಕಿಯ ಆಪತ್ತು ಸಂಭವಿಸಲಿದೆ. ಜಲಕಂಟಕವೂ ಇದೆ. ಹೊಸ ರೋಗಗಳು ಉದ್ಭವ ಆಗಲಿದೆ ಎಂದು ಕೋಡಿಮಠದ ಶ್ರೀಗಳು ತಿಳಿಸಿದ್ದಾರೆ.