ಜಿಲ್ಲೆ

ರಾಜ್ಯ ಮಹಾನಗರ ಪಾಲಿಕೆ ನೌಕರರ ಪ್ರತಿಭಟನೆ ಮುಂದುವರಿಕೆ:ಸರ್ಕಾರದ ನಡೆಗೆ ಆಕ್ರೋಶ

ಬೆಂಗಳೂರು: ವೃಂದ ಮತ್ತು ನೇಮಕಾತಿ ನಿಯಮಕ್ಕೆ ತಿದ್ದುಪಡಿ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘಗಳ ಪರಿಷತ್ತು, ಕೈಗೊಂಡಿರುವ ಅನಿರ್ದಿಷ್ಟಾವಧಿ ಮುಷ್ಕರ ಬುಧವಾರವೂ ಮುಂದುವರಿದಿದೆ.

ಬಿಬಿಎಂಪಿ ಹೊರತುಪಡಿಸಿ ದಾವಣಗೆರೆ,ಶಿವಮೊಗ್ಗ, ಮಂಗಳೂರು, ಮೈಸೂರು, ತುಮಕೂರು, ವಿಜಯಪುರ, ಕಲಬುರಗಿ,ಹುಬ್ಬಳ್ಳಿ-ಧಾರವಾಡ,ಬೆಳಗಾವಿ ಮತ್ತು ಬಳ್ಳಾರಿ ಮಹಾನಗರ ಪಾಲಿಕೆಯ ಸಾವಿರಾರು ನೌಕರರು ಸಾಮೂಹಿಕ ರಜೆ ಹಾಕಿ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅಲ್ಲದೆ, ಜಿಲ್ಲಾ ಹಂತಗಳಲ್ಲೂ ನೌಕರರರು ಪ್ರತಿಭಟನೆ ನಡೆಸುತ್ತಿರುವ ಪರಿಣಾಮ ವಾರ್ಡ್ ಕಚೇರಿಗಳು, ಉಪ ವಿಭಾಗದ ಕಚೇರಿಗಳು ಮತ್ತು ನಾಗಾರಿಕ ಸೇವಾ ಕೇಂದ್ರಗಳ ಕಾರ್ಯಚಟುವಟಿಕೆಗಳು ಬುಧವಾರವೂ ಸ್ತಬ್ಧವಾಗಿತ್ತು. ಇದರಿಂದ ತೆರಿಗೆ ಪಾವತಿ, ಜನನ ಪ್ರಮಾಣ ಪತ್ರ ಸೇರಿ ಹಲವು ಕೆಲಸಗಳಲ್ಲಿ ವ್ಯತ್ಯಯ ಉಂಟಾಯಿತು. ಯಾವುದೇ ಸೇವೆ ಸಿಗದೆ ಸಾರ್ವಜನಿಕರು ತೊಂದರೆ ಅನುಭವಿಸುವಂತಾಯಿತು.

ಅಲ್ಲದೆ, ರಾಜ್ಯ ನಗರಪಾಲಿಕೆ ನಗರಸಭೆ ಪುರಸಭೆಗಳ ಪೌರ ಕಾರ್ಮಿಕರ ಸಂಘ, ಬಿಬಿಎಂಪಿ ಸ್ವಚ್ಚತಾ ಪೌರ ಕಾರ್ಮಿಕರ ಸಂಘಗಳು ಪ್ರತಿಭಟನೆಗೆ ನೈತಿಕ ಬೆಂಬಲ ಸೂಚಿಸಿರುವ ಹಿನ್ನೆಲೆಯಲ್ಲಿ ಕಸ ವಿಲೇವಾರಿಯನ್ನೂ ಸಹ ನಿಲ್ಲಿಸಲಾಗಿದೆ. 7ನೇ ವೇತನ ಆಯೋಗದ ಮಹಾನಗರ ಪಾಲಿಕೆ ನೌಕರರಿಗೆ ವಿಸ್ತರಿಸಬೇಕು.ವೃಂದ ಮತ್ತು ನೇಮಕಾತಿಯಲ್ಲಿ ತಿದ್ದುಪಡಿ ತರಬೇಕು. ಕೆಜಿಐಡಿ ಸೌಲಭ್ಯ ಕಲ್ಪಿಸಬೇಕು. ಆರೋಗ್ಯ ಸಂಜೀವಿನಿ ಯೋಜನೆ ಜಾರಿಯಾಗಬೇಕು. ಪ್ರತಿವರ್ಷ ಕ್ರೀಡಾಕೂಟ ಆಯೋಜನೆ ಮಾಡಬೇಕು. ಮಹಾನಗರ ಪಾಲಿಕೆಯಲ್ಲಿ ಹಲವಾರು ವರ್ಷಗಳಿಂದ ಮುಂಬಡ್ತಿ ನೀಡಿಲ್ಲ. ಈ ಎಲ್ಲ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ ಮಾಡುತ್ತಿದ್ದೇವೆ ವಿವಿಧ ಮಹಾನಗರ ಪಾಲಿಕೆಯ ಸಂಘದ ಪದಾಧಿಕಾರಿಗಳು ಹೇಳಿದರು.

ಸರ್ಕಾರ ವಿರುದ್ಧ ಆಕ್ರೋಶ:

ರಾಜ್ಯದ ವಿವಿಧ ಮಹಾನಗರಪ ಪಾಲಿಕೆಗಳಿಂದ ಆಗಮಿಸಿರುವ ಸಾವಿರಾರು ನೌಕರರು ‘ಕಾಪಾಡಿ ಕಾಪಾಡಿ’, ‘ಬೇಕೇ ಬೇಕು ನ್ಯಾಯ ಬೇಕು’, ಅಯ್ಯಯೋ ಅನ್ಯಾಯ ಅನ್ಯಾಯ’, ಲಕ ಪ್ರದರ್ಶಿಸಿ ಸರ್ಕಾರದ ವಿರುದ್ಧ ೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಿಬಿಎಂಪಿ ಆಯುಕ್ತರು ಹೊರತುಪಡಿಸಿ ಇತರೆ ಇಲಾಖೆಗಳ ಮಹಾನಗರ ಪಾಲಿಕೆಯ ಆಯುಕ್ತರು ನಮ್ಮ ಸಮಸ್ಯೆಗಳಿಗೆ ಕಿವಿಗೊಡುತ್ತಿಲ್ಲ. ಬೇಡಿಕೆಗಳನ್ನು ಈಡೇರಿಸುವಂತೆ ಹಲವು ಬಾರಿ ಮನವಿ ಪತ್ರ ಸಲ್ಲಿಸಿದ್ದರೂ ನಗರಾಭಿವೃದ್ಧಿ ಸಚಿವರು, ಕಾರ್ಯದರ್ಶಿ ಸೇರಿ ಇತರೆ ಉನ್ನತ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಪ್ರತಿಭಟನೆ ಸ್ಥಳಕ್ಕೆ ಸಂಬಂಧಪಟ್ಟ ಇಲಾಖೆ ಸಚಿವರು ಭೇಟಿ ನೀಡುತ್ತಿಲ್ಲ. ಯಾವುದೇ ಕಾರಣಕ್ಕೂ ಪ್ರತಿಭಟನೆ ವಾಪಸ್ ಪಡೆಯುವುದಿಲ್ಲ ಎಂದು ಪ್ರತಿಭಟನಕಾರರು, ಸರ್ಕಾರದ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು. ಇ- ಆಸ್ತಿ ನೋಂದಣಿ ಪದ್ಧತಿಯನ್ನು ಹಿಂದೆ ಇರುವ ನಿಯಮದಂತೆ ಮುಂದುವರೆಸಬೇಕು.ಎರವಲು ಸೇವೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳನ್ನು ಮಾತೃ ಇಲಾಖೆಗೆ ವರ್ಗಾವಣೆ ಮಾಡಬೇಕು.ಕಾನೂನುಬಾಹಿರವಾಗಿ ಕಾರ್ಯ ನಿರ್ವಹಿಸುತ್ತಿರುವ ಮಾರ್ಷಲ್ ರದ್ದುಪಡಿಸಬೇಕು. ಈ ಮೇಲಿನ ಸಮಸ್ಯೆಗಳನ್ನು ಪರಿಶೀಲಿಸಿ ಬಗೆಹರಿಸುತ್ತೇವೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತರು ನಮಗೆ ಆಶ್ವಾಸನೆ ಕೊಟ್ಟಿದ್ದಾರೆ. ಆದರೆ, ಅದಷ್ಟೂ ಬೇಗ ಇದು ಕಾರ್ಯಗತವಾಗಬೇಕು.

| ಎ.ಅಮೃತ್‌ರಾಜ್, ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ.