ಜಿಲ್ಲೆ

27 ಸೌರಶಕ್ತಿಯಿಂದ ದೇಶದ ಆರ್ಥಿಕತೆಗೆ ಬಲ : ಸೆಲ್ಕೋ ಜನರಲ್ ವ್ಯಾನೇಜರ್ ಗುರು ಪ್ರಕಾಶ್ ಶೆಟ್ಟಿ ಅಭಿಮತ

ಸೌಮ್ಯ ಆರ್

ಮೂಲ್ಕಿ: ಸ್ಥಿರ ಇಂಧನ ಮೂಲವಾದ ಸೌರಶಕ್ತಿಯನ್ನು ಬಳಸುವ ಮೂಲಕ ದೇಶದ ಅರ್ಥಿಕ ಶಕ್ತಿಯನ್ನು ಬೆಳೆಸುವಲ್ಲಿ ಸಹಕಾರ ನೀಡುವುದು ನಮ್ಮ ಕರ್ತವ್ಯ ಎಂದು ಸೆಲ್ಕೋ ಸಂಸ್ಥೆಯ ಜನರಲ್ ವ್ಯಾನೇಜರ್ ಗುರು ಪ್ರಕಾಶ್ ಶೆಟ್ಟಿ ಹೇಳಿದರು.

ಮೂಲ್ಕಿ ವಿಜಯ ಕಾಲೇಜು ಆಶ್ರಯದಲ್ಲಿ ಮಂಗಳೂರು ಯುನಿವರ್ಸಿಟಿ ಭೌತಶಾಸ್ತ್ರ ಉಪನ್ಯಾಸಕರ ಸಂ ಹಾಗೂ ಮಣಿಪಾಲದ ಸೆಲ್ಕೋ ಸಂಸ್ಥೆಯ ಮೂಲಕ ನಡೆದ ನವೀಕರಿಸಬಹುದಾದ ಇಂಧನಗಳ ಮೂಲಗಳು ಹಾಗೂ ಸುಸ್ಥಿರ ಅಭಿವೃದ್ಧಿ ಎಂಬ ವಿಷಯದ ರಾಜ್ಯಮಟ್ಟದ ಕಾರ್ಯಾಗಾರ ಉದ್ಘಾಟಿಸಿ ವಾತನಾಡಿದರು.

ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಕಾರ್ಯದರ್ಶಿ ವರದರಾಯ ಪೈ ವಾತನಾಡಿ, ಅಕಾಡೆಮಿಯ ಅಡಿಯಲ್ಲಿರುವ ಎಲ್ಲ ಶಿಕ್ಷಣ ಸಂಸ್ಥೆಗಳಿಗೂ ಇಂತಹ ಅಗತ್ಯ ಕಾರ್ಯಕ್ರಮಗಳನ್ನು ಒದಗಿಸಲಾಗುತ್ತಿದ್ದು, ವಿದ್ಯಾರ್ಥಿಗಳು ಸೂಕ್ತ ತರಬೇತಿ, ವಾಹಿತಿ ಪಡೆದು ಮುಂದೆ ಸೋಲಾರ್ ಮೂಲಕ ಹೆಚ್ಚಿನ ಶಿಕ್ಷಣಕ್ಕೆ ಆದ್ಯತೆ ನೀಡಬೇಕಿದೆ ಎಂದರು.

ಮೂಲ್ಕಿ ನಗರ ಪಂಚಾಯಿತಿ ಅಧ್ಯಕ್ಷ ಸತೀಶ್ ಅಂಚನ್ ಅತಿಥಿಯಾಗಿ ವಾತನಾಡಿ, ಈ ಕಾರ್ಯಕ್ರಮ ಕಾಲೇಜು ಹಂತದಲ್ಲಿ ನಡೆಯುವುದು ಸೂಕ್ತ. ಸೌರಶಕ್ತಿ ಬಳಸಿ ವಿದ್ಯುತ್ ಉತ್ಪತ್ತಿ ಮತ್ತು ಬಳಕೆ ಸರ್ಕಾರದ ಮುಂದಿನ ಆದ್ಯತೆಯ ಆಯ್ಕೆ ಇದಕ್ಕಾಗಿ ಎಲ್ಲರೂ ಸನ್ನದ್ಧರಾಗಬೇಕಾಗಿದೆ ಎಂದರು.

ಎ.ಪಿ.ಟಿ.ಎಂ.ಯು.ನ ಅಧ್ಯಕ್ಷ ಪ್ರೊ.ಜಗನ್ನಾಥ ಎನ್., ಉದ್ಯಮಿ, ಸವಾಜ ಸೇವಕ ಜಾನ್ ಕ್ವಾಡ್ರಸ್ ವಾತನಾಡಿದರು. ಕಾರ್ಯಾಗಾರದಲ್ಲಿ ಸೆಲ್ಕೋ ಹಿರಿಯ ಅಧಿಕಾರಿಗಳಾದ ಶೇಖರ್ ಶೆಟ್ಟಿ ಪ್ರಸಾದ್ ಬಿ., ಪ್ರವೀಣ್ ಕುವಾರ್ ಸಂಪನ್ಮೂಲ ವ್ಯಕ್ತಿಗಳಾಗಿ ವಾಹಿತಿ ನೀಡಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ.ವೆಂಕಟೇಶ್ ಭಟ್ ಪ್ರಸ್ತಾವಿಸಿದರು. ಮರ್ಶಿತಾ ಸ್ವಾಗತಿಸಿದರು. ಸ್ವಾತಿ ಸಹಕರಿಸಿದ್ದರು. ಲತೀಫಾ ಫಲಕ್ ನಿರೂಪಿಸಿದರು. ಸುಮಂಗಲಾ ವಂದಿಸಿದರು.