ಕುಂದಾಪುರ: ನಡೂರಿನ ಶ್ರೀ ವಾಣಿ ಪ್ರೌಢಶಾಲೆಯಲ್ಲಿ 2024-25ನೇ ಸಾಲಿನ ಜಿಲ್ಲಾ ಮಟ್ಟದ ವೃತ್ತಿ ಶಿಕ್ಷಣ ವಸ್ತು ಪ್ರದರ್ಶನ ಶೈಕ್ಷಣಿಕ ಹಾಗೂ ಮಕ್ಕಳ ವತ್ತಿ ಶಿಕ್ಷಣ ಕಲಿಕೋತ್ಸವದಲ್ಲಿ ಭಾಗವಹಿಸಿದ ಕುಂದಾಪುರ ಸಂತ ಜೋಸೆಫರ ಪ್ರೌಢಶಾಲೆ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಅರ್ಹತೆ ಪಡೆದಿದೆ. ವೃತ್ತಿ ಶಿಕ್ಷಣ ಶಿಕ್ಷಕಿ ಸೆಲಿನ್ ಡಿಸೋಜ ಹಾಗೂ ವಿದ್ಯಾರ್ಥಿನಿಯರಾದ ಭವ್ಯ ಹಾಗೂ ನೇಹಾ ಭಾಗವಹಿಸಿದ್ದರು.