ಜಿಲ್ಲೆ

ಹಾಕಿಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ

Gadag - Desk - Tippanna Avadoot

ರಟ್ಟಿಹಳ್ಳಿ: ಪಟ್ಟಣದ ಶ್ರೀ ಕುಮಾರೇಶ್ವರ ಪದವಿ ಪೂರ್ವ ಕಾಲೇಜ್ ವಿದ್ಯಾರ್ಥಿಗಳು ಇತ್ತೀಚೆಗೆ ಹಾವೇರಿಯಲ್ಲಿ ಜರುಗಿದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಹಾಕಿ ಕ್ರೀಡೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ಡಿ. 2 ಮತ್ತು 3ರಂದು ಕೊಡಗು ಜಿಲ್ಲೆಯಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ.

ವಿದ್ಯಾರ್ಥಿಗಳಾದ ಪ್ರಭಾವತಿ ಗೌಡರ, ಗುತ್ಯವ್ವ ಕರಿಯಣ್ಣನವರ, ಚಂದ್ರಕಲಾ ಇಂಗಳಗೊಂದಿ, ರಂಜಿತಾ ಜೋಗೇರ, ಬಸಮ್ಮ ಎಲೇದಹಳ್ಳಿ, ಲಕ್ಷ್ತ್ರಿ್ಮ ದೊಡ್ಡಗೌಡರ, ಪೂಜಾ ಚೂರೇರ, ಅಕ್ಷತಾ ಬೆಳಗಾವಿ, ಕವಿತಾ ಕಡೂರು, ವಿದ್ಯಾ ಕಬ್ಬಿಣಕಂತಿಮಠ, ಸೌಂಧರ್ಯ ಹರಿಜನ, ಭಾಗ್ಯ ಅಂಗಡಿ ಈ ವಿದ್ಯಾರ್ಥಿಗಳು ಹಾಕಿ ಕ್ರೀಡೆಯಲ್ಲಿ ಜಿಲ್ಲಾ ಮಟ್ಟದಲ್ಲಿ ವಿಜೇತರಾಗಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ನಿವೃತ್ತ ಪ್ರಾಚಾರ್ಯ ಎನ್.ಎಂ. ಶಾಸ್ತ್ರಿ, ಪ್ರಾಚಾರ್ಯ ಎಸ್.ಪಿ. ಬೆನಕನಕೊಂಡ, ಉಪನ್ಯಾಸಕರಾದ ಎಚ್.ಬಿ. ಪ್ರಕಾಶ, ಚೇತನ ಅಂಗರಗಟ್ಟಿ, ಎಂ.ಎನ್.ನಂದೀಹಳ್ಳಿ, ಗೀತಾ ರೋಗಣ್ಣನವರ, ಸಿಬ್ಬಂದಿ ರಾಜೇಶ್ವರಿ, ಜಮಖಂಡಿ ಉಪಸ್ಥಿತರಿದ್ದರು.