ವಿಜಯಪುರದಲ್ಲಿ ನಡೆದ ಜಿಲ್ಲಾಮಟ್ಟದ ಯುವಜನೋತ್ಸವ ಕಾರ್ಯಕ್ರಮದಲ್ಲಿ ನಗರದ ಬಂಜಾರಾ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳು ಲಂಬಾಣಿ ನೃತ್ಯದಲ್ಲಿ ಪ್ರಥಮ ಸ್ಥಾನ ಪಡೆದರು. ಜಯಶ್ರೀ ರಾಠೋಡ, ಸೋಮಶೇಖರ ರಾಠೋಡ, ಡಿ.ಎಲ್.ಚವ್ಹಾಣ, ಕೆ.ಜಿ.ರಾಠೋಡ ಇತರರಿದ್ದರು. 
ಜಿಲ್ಲೆ

ನೃತ್ಯ ಪ್ರದರ್ಶನದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ

Vijayapura

ವಿಜಯಪುರ: ಇಲ್ಲಿನ ವಚನ ಪಿತಾಮಹ ಡಾ..ಗು.ಹಳಕಟ್ಟಿ ಸ್ಮಾರಕ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಯುವಜನೋತ್ಸವದಲ್ಲಿ ಲಂಬಾಣಿ ನೃತ್ಯ ಪ್ರದರ್ಶಿಸಿ ಪ್ರಥಮ ಸ್ಥಾನ ಪಡೆದ ನಗರದ ಬಂಜಾರಾ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳು ರಾಜ್ಯಮಟ್ಟದ ಯುವಜನೋತ್ಸವಕ್ಕೆ ಆಯ್ಕೆಯಾಗಿದ್ದಾರೆ.

ಜಿಲ್ಲಾಡಳಿತ, ಜಿಪಂ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಬಿಎಲ್‌ಡಿಇ ಸಂಸ್ಥೆಯ ಸಂಗನಬಸವ ಸ್ವಾಮೀಜಿ ಔಷಧ ಮಹಾವಿದ್ಯಾಲಯ ಸಹಯೋಗದಲ್ಲಿ ಯುವಜನೋತ್ಸವ ಹಮ್ಮಿಕೊಳ್ಳಲಾಗಿತ್ತು. ವಿದ್ಯಾರ್ಥಿಗಳ ಸಾಧನೆಗೆ ನೃತ್ಯ ಮಾರ್ಗದರ್ಶಕಿ ಜಯಶ್ರೀ ರಾಠೋಡ, ತಂಡದ ವ್ಯವಸ್ಥಾಪಕ ಸೋಮಶೇಖರ ರಾಠೋಡ, ಸಂಸ್ಥೆ ಅಧ್ಯಕ್ಷ ಡಿ.ಎಲ್.ಚವ್ಹಾಣ, ಕೆ.ಜಿ.ರಾಠೋಡ, ಆರ್.ಡಿ.ಚವ್ಹಾಣ, ಇ.ಡಿ.ಲಮಾಣಿ ಹರ್ಷ ವ್ಯಕ್ತಪಡಿಸಿದ್ದಾರೆ.