ಜಿಲ್ಲೆ

ರಾಜ್ಯಮಟ್ಟದ ಪ್ರಾಜೆಕ್ಟ ಸ್ಪರ್ಧೆಗೆ ಆಯ್ಕೆ

Belagavi

ನಿಪ್ಪಾಣಿ: ಸ್ಥಳೀಯ ವಿ.ಎಸ್.ಎಂ. ಸೋಮಶೇಖರ ಆರ್. ಕೋಠಿವಾಲೆ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಎರಡು ಯೋಜನೆಗಳು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಆಯೋಜಿಸಿದ್ದ ಅವಿಷ್ಕಾರ ರಾಜ್ಯಮಟ್ಟದ ಪ್ರಾಜೆಕ್ಟ್ ಸ್ಪರ್ಧೆಯ ಅಂತಿಮ ಹಂತಕ್ಕೆ ಆಯ್ಕೆಗೊಂಡಿವೆ.
ಕಾಲೇಜ್‌ನ ಇ ಆ್ಯಂಡ್ ಸಿ ವಿಭಾಗದ ವಿದ್ಯಾರ್ಥಿಗಳು ವಿಶೇಷ ಅಧ್ಯಯನ ನಡೆಸಿ ಸಿದ್ಧಪಡಿಸಿದ ಸ್ಮಾರ್ಟ್ ಗಾರ್ಬೇಜ್ ಕಲೆಕ್ಷನ್ ರೊಬೊಟಿಕ್ ವೈಕಲ್(ಯೋಜನೆ-1) ಮತ್ತು ಗ್ರೋವ್ ಇಟ್ ಯುವರಸೆಲ್ಫ್ (ಯೋಜನೆ-2) ಅಂತಿಮ ಹಂತಕ್ಕೆ ತಲುಪಿವೆ.

ಯೋಜನೆ-1ನ್ನು ಪ್ರೊ. ಪ್ರಶಾಂತ ಹೆಬ್ಬಾಳೆಯವರ ಮಾರ್ಗದರ್ಶನದಲ್ಲಿ ನವೀನ ಪಾಚಂಗಿ, ಅಕ್ಷಯ ಚೌಗುಲೆ, ಆಸೀಮ್ ಮೋಮಿನ್, ನವೀನ ಎಂ. ಪಾಚಂಗಿ ಹಾಗೂ ಯೋಜನೆ-2ನ್ನು ಪ್ರೊ. ಮಲ್ಲಿಕಾರ್ಜುನ ಗಣಾಚಾರಿ ಮಾರ್ಗದರ್ಶನದಲ್ಲಿ ಪ್ರಿಯಾಂಕಾ ತಿಬಿಲೆ, ತೃಪ್ತಿ ಪಾಟೀಲ, ಗಾಯತ್ರಿ ಜಂಗಮ, ಆಸಿಯಾ ದೇಸಾಯಿ ಈ ಅಂತಿಮ ವರ್ಷದ ವಿದ್ಯಾರ್ಥಿಗಳು ಸಿದ್ಧಪಡಿಸಿದ್ದಾರೆ. ವಿಟಿಯುದಿಂದ ಪ್ರತಿ ಯೋಜನೆಗೆ 5 ಸಾವಿರ ರೂ.ದಂತೆ ಎರಡೂ ಯೋಜನೆಗಳಿಗೆ ಒಟ್ಟು 10 ಸಾವಿರ ರೂ. ಆರ್ಥಿಕ ನೆರವು ಪಡೆಯಲಿವೆ.

ಅಂತಿಮ ಹಂತಕ್ಕೆ ರಾಜ್ಯದ ವಿವಿಧ ತಾಂತ್ರಿಕ ಮಹಾವಿದ್ಯಾಲಯಗಳ ಒಟ್ಟು 80 ಯೋಜನೆಗಳು ಮಾತ್ರ ಆಯ್ಕೆಗೊಂಡಿವೆ. ಬೆಳಗಾವಿ ಜಿಲ್ಲೆಯಲ್ಲಿ ಕೇವಲ ಎರಡು ಮಹಾವಿದ್ಯಾಲಯಗಳ ಎರಡು ಯೋಜನೆಗಳು ಅಂತಿಮ ಸ್ಪರ್ಧೆಗೆ ಆಯ್ಕೆಗೊಂಡಿದ್ದು, ಅದರಲ್ಲಿ ವಿಎಸ್‌ಎಂಎಸ್‌ಆರ್‌ಕೆಐಟಿ ಮಹಾವಿದ್ಯಾಲಯವೂ ಒಂದಾಗಿದೆ ಎಂದು ಪ್ರಾಚಾರ್ಯ ಡಾ. ಜಗದೀಶಗೌಡ ಹೇಳಿದ್ದಾರೆ.

ವಿದ್ಯಾರ್ಥಿಗಳ ಈ ಮಹತ್ ಸಾಧನೆಗೆ ಸಂಸ್ಥೆಯ ಚೇರ್ಮನ್ ಚಂದ್ರಕಾಂತ ಕೋಠಿವಾಲೆ ಮತ್ತು ಆಡಳಿತ ಮಂಡಳಿಯ ಸದಸ್ಯರು, ಸಿಇಒ ಡಾ. ಸಿದ್ಧಗೌಡ ಪಾಟೀಲ, ಪ್ರಾಚಾರ್ಯರು, ಎಲ್ಲ ವಿಭಾಗದ ಮುಖ್ಯಸ್ಥರು, ಸಿಬ್ಬಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.