ಜಿಲ್ಲೆ

ದೇಶಭಕ್ತಿ ಗೀತೆಗಳ ನೃತ್ಯ ಸ್ಪರ್ಧೆ  1.20 ಲಕ್ಷ ರೂ., ಬಹುಮಾನ ಮೊತ್ತ

ಜಗನ್ನಾಥ್ ಕಾಳೇನಹಳ್ಳಿ

ತುಮಕೂರು: ರಾಷ್ಟ್ರೀಯ ಮಾನವ-ಪರಿಸರ ಸಂರಕ್ಷಣಾ ಪಡೆ ವತಿಯಿಂದ ರಾಷ್ಟ್ರ ಜಾಗೃತಿ ಅಭಿಯಾನ-2024 ಅಂಗವಾಗಿ ರಾಜ್ಯ ಮಟ್ಟದ ದೇಶಭಕ್ತಿ ಗೀತೆಗಳ ನೃತ್ಯ ಸ್ಫರ್ಧೆ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಜ.27ರಂದು ಆಯೋಜಿಸಲಾಗಿದ್ದು ಜ.15ರೊಳಗೆ ನೋಂದಣಿಗೆ ಅವಕಾಶವಿದೆ.

ದೇಶದ ಸಾಂಸ್ಕೃತಿಕ ಮೌಲ್ಯವನ್ನು ಪ್ರತಿನಿಧಿಸುವ ಎಲ್ಲಾ ನೃತ್ಯಗಳಿಗೂ ಅವಕಾಶವಿದ್ದು ಒಂದು ತಂಡದಲ್ಲಿ ಕನಿಷ್ಟ 10 ಜನರಿರಬೇಕು, ಹತ್ತು ನಿಮಿಷ ಸಮಾಯಾವಕಾಶದಲ್ಲಿ ನೃತ್ಯ ಪ್ರದರ್ಶಿಸಬೇಕು.

ಸ್ಫರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನ 50 ಸಾವಿರ ರೂ., 40 ಸಾವಿರ ದ್ವಿತೀಯ ಹಾಗೂ 30 ಸಾವಿರ ರೂ., ತೃತೀಯ ಬಹುಮಾನವಿದೆ. ಮಾಹಿತಿಗೆ ಮೊ.9591915980, 9448660545, 9036109271, 9480091849 ಸಂಪರ್ಕಿಸಿ. ಮೊದಲು ನೋಂದಣಿಯಾದ 30 ತಂಡಗಳಿಗೆ ಆದ್ಯತೆ.