ವಿಜಯವಾಣಿ ಸುದ್ದಿಜಾಲ ಗದಗ
ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ನೇಮಕಾತಿ ಮಾಡಲು ಸರ್ಕಾರ ಸಕಾರಾತ್ಮಕ ಚಿಂತನೆ ನಡೆಸಿದೆ. ಈ ಬಗ್ಗೆ ಬೆಳಗಾವಿ ಅಧಿವೇಶನದಲ್ಲಿ ಚರ್ಚೆ ಆಗಲಿದ್ದು, ಕೊನೆಪಕ್ಷ 2020 ರ ವರೆಗೆ ನಿವೃತ್ತಿ ಆದ ಹುದ್ದೆ ನೇಮಕಾತಿ ಸರ್ಕಾರದಿಂದ ಭರವಸೆ ನಿಡುತ್ತೇನೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ನಗರದ ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ಭಾನುವಾರ ರಾಜ್ಯ ಮಟ್ಟದ ಪದವಿ ಪೂರ್ವ ಮಹಾವಿದ್ಯಾಲಯಗಳ ರಾಜ್ಯಮಟ್ಟದ ಶೈಕ್ಷಣಿಕ ಸಮ್ಮೇಳ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ 2015 ರಿಂದ 2023 ರ ವರೆಗೆ ನಿವೃತ್ತಿಯಾದ 8000 ಖಾಲಿ ಹುದ್ದೆಗಳ ನೇಮಕಾತಿ ಮಾಡಬೇಕಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಲಾಗಿತ್ತು. 2020ರ ವರೆಗೆ ಖಾಲಿ ಆಗಿರುವ ಹುದ್ದೆಗಳ ಭತಿರ್ಗೆ ಅನುಮತಿ ಪಡೆಯುವ ವಿಶ್ವಾಸ ಇದೆ ಎಂದು ಹೇಳಿದರು.
ಮುಂದಿನ ಆಥಿರ್ಕ ವರ್ಷದಲ್ಲಿ 500 ರಿಂದ 600 ಶಾಲೆಗಳಲ್ಲಿ ಪಬ್ಲಿಕ್ ಶಾಲಾ ವ್ಯವಸ್ಥೆ ಜಾರಿ ಆಗಲಿದೆ. 2800 ಕೋಟಿ ಅನುದಾನ ಒದಗಿಸುವ ಗುರಿ ಹೊಂದಲಾಗಿದೆ. ಕೈಗಾರಿಕೆ, ಇತರೆ ಸಂಸ್ಥೆಗಳ ಸಿಎಸ್ಆರ್(ಸಾಮಾಜಿಕ ಅಭಿವೃದ್ಧಿ) ಅನುದಾನವನ್ನು ಸಂರ್ಪೂಣ ಶಿಕ್ಷಣ ಇಲಾಖೆಗೆ ವರ್ಗಾಯಿಸಲು ಸರ್ಕಾರ ತಿರ್ಮಾನಿಸಿದೆ ಎಂದು ಸಚಿವರು ಹೇಳಿದರು.
ಸಚಿವ ಎಚ್.ಕೆ. ಪಾಟೀಲ ಮಾತನಾಡಿ, ಅನುದಾನ ಶಿಕ್ಷಣ ಸಂಸ್ಥೆಗಳಿಗೆ ಅನುದಾನ ಕೊರತೆ ಆದರೆ, ಉತ್ತರ ಕರ್ನಾಟಕ ಶೈಕ್ಷಣಿಕ ವ್ಯವಸ್ಥೆ ಕುಸಿಯುತ್ತದೆ. ಅನುದಾನ ಕೊರತೆ ಆಗುವಂತಹ ಯಾವುದೇ ನಿರ್ಧಾರವನ್ನು ಶಿಕ್ಷಣ ಇಲಾಖೆ ತೆಗದುಕೊಳ್ಳಬಾರದು. ಆಥಿರ್ಕ ಕಷ್ಟಗಳನ್ನು ನೀಗಿಸಿ, ಸವಾಲು ಎದುರಿಸಿ ಸಚಿವ ಮುಧು ಬಂಗಾರಪ್ಪ ಅವರು ಇಲಾಖೆಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಪ್ರಸ್ತುತವಾಗಿ ಶಿಕ್ಷಕರ ನೇಮಕಾತಿ ಗೊಂದಲ, ಪಿಂಚಣಿ ವಿಷಯ, ಅನುದಾನ ಕೊರತೆ ಸೇರಿದಂತೆ ಹಲವು ಸಮಸ್ಯೆಗಳನ್ನು ಶಿಕ್ಷಣ ಇಲಾಖೆ ಎದುರಿಸುತ್ತಿದೆ. ಕ್ಲಿಷ್ಟ ಸಮಸ್ಯೆಗಳನ್ನು ಸರಳವಾಗಿ ಶಿಕ್ಷಣ ಸಚಿವರು ನಿಭಾಯಿಸಿದ್ದಾರೆ ಎಂದರು.
ವಿಧಾನ ಪರಿಷತ್ ಸದಸ್ಯ ಎಸ್.ವಿ, ಸಂಕನೂರು ಶಿಕ್ಷಕರು ಮತ್ತು ಶೈಕ್ಷಣಿಕ ಕ್ಷೇತ್ರದ ಸವಾಲುಗಳ ಬಗ್ಗೆ ವಿಸತವಾಗಿ ಮಾತಮಾಡಿ ಸಚಿವರ ಗಮನ ಸೆಳೆದರು.
ಕಾರ್ಯಕ್ರಮದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ, ಮಾಜಿ ಸಚಿವ, ಶಾಸಕ ಸಿ.ಸಿ. ಪಾಟೀಲ, ಉಷಾ ದಾಸರ, ಸುನಂದಾ ಬಾಕಳೆ, ಕೃಷ್ಣಪ್ಪ ಇ, ಇತರರು ಇದ್ದರು
ನೂತನ ಯೋಜನೆಗಳು:
ಶಿಕ್ಷಣ ಇಲಾಖೆಯಲ್ಲಿ ಜಾರಿ ಆಗಲಿರುವ ನೂತನ ಯೋಜನೆಗಳ ಬಗ್ಗೆ ಪ್ರಸ್ತಾಪಿಸಿದ ಮಧು ಬಂಗಾರಪ್ಪ ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಸ್ಥಳಿಯ ಸಂಸತಿ, ಸಂಪ್ರದಾಯ ಉತ್ತೇಜಿಸುವ ಪಠ್ಯಗಳನ್ನು ಕಲಿಸಲಾಗುವುದು. ರಾಜ್ಯದ 60 ಲಕ್ಷ ಮಕ್ಕಳ ಆರೋಗ್ಯ ದೃಷ್ಟಿಯಿಂದ ಮುಂಬರುವ ದಿನಗಳಲ್ಲಿ ರಾಗಿ ಮಿಶ್ರಿತ ಹಾಲನ್ನು ಶಾಲೆಗಳಲ್ಲಿ ವಿತರಿಸುವ ಯೋಜನೆಗೆ ರಾಜ್ಯ ಸರ್ಕಾರ ಚಾಲನೆ ನೀಡಲಿದೆ ಎಂದು ತಿಳಿಸಿದರು.
ಎಸ್.ವಿ. ಸಂಕನೂರು ಪ್ರಸ್ತಾಪಿಸಿದ ವಿಷಯಗಳು:
ಮಧು ಬಂಗಾರಪ್ಪ ಸ್ಪಷ್ಟನೆ:
ಕೋಟ್:
ಮಕ್ಕಳಿಗೆ ಪರಿಣಾಮಕಾರಿ ಶಿಕ್ಷಣ ನೀಡುವಲ್ಲಿ ನಾವು ಎಡವಿದ್ದೇವೆ. ಇಲಾಖೆ, ಶಿಕ್ಷಕರು ಮತ್ತು ಪಾಲಕರು ಈ ಅಪವಾದದ ಹೊಣೆ ಹೊರಬೇಕು.
ಮಧು ಬಂಗಾರಪ್ಪ, ಶಿಕ್ಷಣ ಸಚಿವ