ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿಯಲ್ಲಿ ಬಿಜೆಪಿಗೆ ಹೊಸ ಚೈತನ್ಯ ನೀಡುವ ದೃಷ್ಟಿಯಿಂದ ಭಾನುವಾರ ಜಿಲ್ಲಾಮಟ್ಟದ ಬಿಜೆಪಿ ಕಾರ್ಯಕರ್ತರ ಸಮಾವೇಶ ಆಯೋಜಿಸಿದ್ದು, ಮಾಜಿ ಸಿಎಂ, ಮಾಜಿ ಸಚಿವರು, ಶಾಸಕರು ಭಾಗಿಯಾಗಿದ್ದಾರೆ.
ನಗರದ ಗಾಂಧಿಭವನದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ ಆಯೋಜಿಸಲಾಗಿದೆ. ಈ ಜಿಲ್ಲಾಮಟ್ಟದ ಕಾರ್ಯಕರ್ತರ ಸಭೆಯಲಿ ರಾಜ್ಯಮಟ್ಟದ ಬಿಜೆಪಿಯ ಘಟಾನುಗಟಿ ನಾಯಕರು ಭಾಗಿಯಾಗಿದ್ದು, ಎಂಪಿ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷವನ್ನು ಸದೃಢವಾಗಿ ಮಾಡುವುದಕ್ಕೆ ಕಾರ್ಯಕರ್ತರಿಗೆ ಟಾನಿಕ್ ನೀಡುವ ದೃಷ್ಟಿಯಿಂದ ಸಭೆ ಆಯೋಜಿಸಲಾಗಿದೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಸಂಸದರಾದ ಮಂಗಲ ಅಂಗಡಿ, ಅಣ್ಣಾಸಾಹೇಬ ಜೊಲ್ಲೆ, ವಿಜಯಪುರದ ಸಂಸದ ರಮೇಶ ಜಿಗಜಿಣಗಿ, ಮಾಜಿ ಸಚಿವರಾದ ಮುರುಗೇಶ ನಿರಾಣಿ, ಬೈರತಿ ಬಸವರಾಜ, ಶಶಿಕಲಾ ಜೊಲ್ಲೆ, ಶಾಸಕರಾದ ಅಭಯ್ ಪಾಟೀಲ, ಬಸನಗೌಡ ಪಾಟೀಲ ಯತ್ನಾಳ, ವಿಠ್ಠಲ ಹಲಗೇಕರ, ಬಾಲಚಂದ್ರ ಜಾರಕಿಹೊಳಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ರಾಜ್ಯಸಭಾ ಮಾಜಿ ಸದಸ್ಯ, ಕೆಎಲ್ ಇ ಸಂಸ್ಥೆ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ, ಮಾಜಿ ಎಂಎಲ್ಸಿ ಮಹಾಂತೇಶ ಕವಟಗಿಮಠ, ಚಲವಾದಿ ನಾರಾಯಣಸ್ವಾಮಿ, ಎ.ಎಸ್. ನಾರಾಯಣಸ್ವಾಮಿ, ಮಾಜಿ ಶಾಸಕರಾದ ಸಂಜಯ್ ಪಾಟೀಲ, ಅನಿಲ್ ಬೆನಕೆ ಹಾಗೂ ಡಾ. ರವಿ ಪಾಟೀಲ, ಎಂ.ಜಿ.ಝಿರಲಿ, ಉಜ್ವಲಾ ಬಡವನಾಚೆ, ಎ.ಎಸ್. ಪಾಟೀಲ, ಚಂದ್ರಶೇಖರ ಕವಟಗಿಮಠ, ಮುರುಗೇಂದ್ರಗೌಡ ಪಾಟೀಲ ಸೇರಿ ಕಾರ್ಯಕರ್ತರು ಪಾಲ್ಗೊಂಡಿದ್ದಾರೆ.