ಜಿಲ್ಲೆ

ಮಾ.1, 2 ರಂದು ರಾಜ್ಯಮಟ್ಟದ ವಕೀಲರ ಕ್ರೀಡಾಕೂಟ

ಗೋಪಾಲಕೃಷ್ಣ ಪಾದೂರ್

ಉಡುಪಿ: ವಕೀಲರ ಸಂಘ ಮತ್ತು ಜಿಲ್ಲಾ ನ್ಯಾಯಾಲಯದ ಶತಮಾನೋತ್ತರ ರಜತ ಮಹೋತ್ಸವ ಅಂಗವಾಗಿ ಎಂಜಿಎಂ ಕಾಲೇಜಿನ ಮೈದಾನದಲ್ಲಿ ಮಾ.1 ಮತ್ತು 2 ರಂದು ರಾಜ್ಯಮಟ್ಟದ ಹೊನಲು ಬೆಳಕಿನ ಕ್ರೀಡಾಕೂಟ ಆಯೋಜಿಸಲಾಗಿದೆ ಎಂದು ಉಡುಪಿ ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್​ ಪ್ರವಿಣ್​ ಕುಮಾರ್​ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪಂದ್ಯಾಕೂಟವನ್ನು ಮಾ.1 ರಂದು ಸಾಯಂಕಾಲ 4 ಗಂಟೆಗೆ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಕಾರ್ಯಾಧ್ಯಕ್ಷ ಹಾಗು ಹೈಕೋರ್ಟ್​ ನ್ಯಾಯಧೀಶ ನ್ಯಾ. ಕಾಮೇಶ್ವರ್​ ರಾವ್​ ಉದ್ಘಾಟಿಸಲಿದ್ದಾರೆ. ಹೈಕೋರ್ಟ್​ ನ್ಯಾಯಮೂರ್ತಿ ಹಾಗೂ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಇ.ಎಸ್​.ಇಂದಿರೇಶ್​ ಅಧ್ಯಕ್ಷತೆ ವಹಿಸಲಿದ್ದಾರೆ. ಹೈಕೋರ್ಟಿನ ನ್ಯಾಯಮೂರ್ತಿ ರಾಜೇಶ್​ ರೈ ಕೆ., ಮಾಹೆ ಸಹ ಕುಲಾಧಿಪತಿ ಡಾ.ಎಚ್​.ಎಸ್​.ಬಲ್ಲಾಳ್​ ಹಾಗು ಎಂಆರ್​ಜಿ ಗ್ರೂಪಿನ ಅಧ್ಯಕ್ಷ ಡಾ.ಕೆ.ಪ್ರಕಾಶ್​ ಶೆಟ್ಟಿ, ಉಡುಪಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಕಿರಣ್​ ಎಸ್​. ಗಂಗಣ್ಣವರ್​ ಭಾಗವಹಿಸಲಿದ್ದಾರೆ ಎಂದರು.

ಸಮಾರೋಪ

ಮಾ. 2 ರಂದು ಸಾಯಂಕಾಲ 7 ಗಂಟೆಗೆ ನಡೆಯುವ ಸಮಾರೋಪ ಮತ್ತು ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ಸಂಸದ ಕೋಟ ಶ್ರೀನಿವಾಸ್​ ಪೂಜಾರಿ ಸಮಾರೋಪ ಭಾಷಣ ಮಾಡಲಿದ್ದಾರೆ. ಶಾಸಕ ಯಶ್ಪಾಲ್​ ಸುವರ್ಣ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ರಾಜ್ಯ ವಕೀಲರ ಪರಿಷತ್​ ಮಾಜಿ ಅಧ್ಯಕ್ಷ ಪಿ.ಪಿ. ಹೆಗ್ಡೆ, ವಿಧಾನ ಪರಿಷತ್​ ಸದಸ್ಯ ಐವನ್​ ಡಿಸೋಜಾ, ಮಾಜಿ ಶಾಸಕ ರಘುಪತಿ ಭಟ್​ ಭಾಗವಹಿಸಲಿದ್ದಾರೆ ಎಂದರು.

ವಿವಿಧ ಉಪಸಮಿತಿಗಳ ಸಂಚಾಲಕರಾದ ಎಂ.ಶಾಂತಾರಾಮ್​ ಶೆಟ್ಟಿ, ದಿವಾಕರ್​ ಎಂ. ಶೆಟ್ಟಿ, ಬಿ. ನಾಗರಾಜ್​, ಪ್ರವಿಣ್​ ಎಂ ಪೂಜಾರಿ, ಆರೂರ್​ ಸುಕೇಶ್​ ಶೆಟ್ಟಿ, ಗಣೇಶ್​ ಕುಮಾರ್​ ಮಟ್ಟು, ಪಂದ್ಯಾಟದ ಉಸ್ತುವಾರಿಗಳಾದ ಸಚಿನ್​ ಕುಮಾರ್​ ಶೆಟ್ಟಿ, ಗಂಗಾಧರ ಶೇರಿಗಾರ್​, ಯೋಗಿಶ್​ ಕುಮಾರ್​ ಸಾಲಿಗ್ರಾಮ, ಸ್ಯಾಂಡ್ರಾ ಆ್ಯನ್ಸಿಲ್ಲಾ ಡಿಸೋಜಾ ಮೊದಲಾದವರು ಉಪಸ್ಥಿತರಿದ್ದರು.