ಜಿಲ್ಲೆ

ರಾಜ್ಯ ಮಟ್ಟದ ಕಾರ್ಮಿಕ ಸಮ್ಮೇಳನ 26ರಿಂದ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ಆಲ್​ ಇಂಡಿಯಾ ಯುನೈಟೆಡ್​ ಟ್ರೇಡ್​ ಯೂನಿಯನ್​ ಸೆಂಟರ್​ (ಎಐಯುಟಿಯುಸಿ) ಕರ್ನಾಟಕ ರಾಜ್ಯ ಸಮಿತಿ ವತಿಯಿಂದ ಅ. 26, 27ರಂದು ಮೈಸೂರಿನಲ್ಲಿ 4ನೇ ರಾಜ್ಯ ಮಟ್ಟದ ಕಾರ್ಮಿಕ ಸಮ್ಮೇಳನ ಆಯೋಜಿಸಲಾಗಿದೆ ಎಂದು ಎಐಯುಟಿಯುಸಿ ರಾಜ್ಯ ಉಪಾಧ್ಯಕ್ಷೆ ಡಿ. ನಾಗಲಕ್ಷ್ಮೀ ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮ್ಮೇಳನ ನಿಮಿತ್ತ ನಂಜರಾಜ ಅರಸ್​ ಛತ್ರದಿಂದ ಟೌನ್​ಹಾಲ್​ ಪ್ರಾಂಗಣವರೆಗೆ ಬೆಳಗ್ಗೆ 11 ಗಂಟೆಗೆ ಕಾರ್ಮಿಕರ ಬೃಹತ್​ ಮೆರವಣಿಗೆ ನಡೆಯಲಿದೆ. 12 ಗಂಟೆಗೆ ಟೌನ್​ಹಾಲ್​ನಲ್ಲಿ ಬಹಿರಂಗ ಸಮಾವೇಶಕ್ಕೆ ಎಐಯುಟಿಯುಸಿ ಅಖಿಲ ಭಾರತ ಅಧ್ಯಕ್ಷ ಕೆ. ರಾಧಾಕೃಷ್ಣ ಚಾಲನೆ ನೀಡಲಿದ್ದಾರೆ. ಪ್ರಧಾನ ಕಾರ್ಯದರ್ಶಿ ಶಂಕರದಾಸ್​ ಗುಪ್ತ ಮುಖ್ಯ ಭಾಷಣಕಾರರಾಗಿ ಆಗಮಿಸುವರು. ಕೆ. ಸೋಮಶೇಖರ ಅತಿಥಿಯಾಗಿ ಆಗಮಿಸುವರು. ಸೋಮಶೇಖರ ಯಾದಗಿರಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಸಂಜೆ 5 ಗಂಟೆಗೆ ಮಹಾರಾಜಾ ಶತಮಾನೋತ್ಸವ ಭವನದಲ್ಲಿ ಪ್ರತಿನಿಧಿಗಳ ಅಧಿವೇಶನ ನಡೆಯಲಿದ್ದು, ಕೆ. ಉಮಾ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಅ. 27ರಂದು ಸಂಘದ ಜನಪ್ರತಿನಿಧಿಗಳ ಸಭೆ ನಡೆಯಲಿದೆ. ಇದೇ ಸಂದರ್ಭದಲ್ಲಿ ಕಾರ್ಮಿಕರಿಗೆ ಕಾಯಂ ಉದ್ಯೋಗ ಒದಗಿಸುವುದು, ಕಾರ್ಮಿಕ ವಿರೋಧಿ 4 ಲೇಬರ್​ ಕೋಡ್​ಗಳನ್ನು ರದ್ದುಪಡಿಸಿ, ಪ್ರಸಕ್ತ ಕಾಯ್ದೆಗಳನ್ನು ಬಲಪಡಿಸಿ, ಕನಿಷ್ಠ ವೇತನ ತಿಂಗಳಿಗೆ 25 ಸಾವಿರ ರೂ.ಗೆ ಹೆಚ್ಚಳ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಹಕ್ಕೊತ್ತಾಯ ಮಂಡಿಸಲಾಗುವುದು ಎಂದರು.
ಗಂಗಾಧರ ಬಡಿಗೇರ, ಅಲ್ಲಾಭಕ್ಷ ಕಿತ್ತೂರ, ಸ್ವಪ್ನಾ ಸುಳ್ಳದ, ರೇಣುಕಾ ಕರಿಗಾರ, ಭುವನಾ ಬಳ್ಳಾರಿ, ಇತರರು ಇದ್ದರು.