ಮೂಡುಬಿದಿರೆ: ಶೋರಿನ್ ರಿಯೂ ಕರಾಟೆ ಅಸೋಸಿಯೇಷನ್, ಸ್ವಾಮಿ ಸ್ಟ್ರೆಂತ್ ಟ್ರೈನಿಂಗ್, ಎಂ.ಕೆ.ಅನಂತ್ರಾಜ್ ಶಾರೀರಿಕ ಶಿಕ್ಷಣ ಕಾಲೇಜು ಆಶ್ರಯದಲ್ಲಿ 22ನೇ ಅಂತರ್ ಶಾಲಾ ರಾಜ್ಯಮಟ್ಟದ ಕರಾಟೆ ಚಾಂಪಿಯನ್‌ಷಿಪ್ ಕನ್ನಡ ಭವನದಲ್ಲಿ ನಡೆಯಿತು.
ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಮುಖಂಡ ಸುದರ್ಶನ ಎಂ., ಎಂ.ಕೆ.ಅನಂತ್ರಾಜ್ ಫಿಸಿಕಲ್ ಎಜುಕೇಶನ್ ಪ್ರಾಂಶುಪಾಲ ಧನಂಜಯ ಶೆಟ್ಟಿ, ಶೋರಿನ್ ರಿಯೂ ಕರಾಟೆ ಅಸೋಸಿಯೇಷನ್ ಅಧ್ಯಕ್ಷ ಅಬುಲ್ ಅಲಾ, ಜಿಲ್ಲಾ ಕರಾಟೆ ಶಿಕ್ಷಕರ ಸಂಘದ ಅಧ್ಯಕ್ಷ ಡಾ.ರಾಹುಲ್ ಟಿ.ಜಿ., ಉಪಾಧ್ಯಕ್ಷ ಅರುಣ್ ಕುಮಾರ್ ನಿಟ್ಟೆ, ಅಂತಾರಾಷ್ಟ್ರೀಯ ತರಬೇತುದಾರ ಸ್ವಾಮಿ ಪ್ರಸಾದ್, ರಾಜ್ಯ ಕರಾಟೆ ಶಿಕ್ಷಕರ ಸಂಘದ ಉಪಾಧ್ಯಕ್ಷ ಸತೀಶ್ ಬೆಳ್ಮಣ್, ಪ್ರಧಾನ ಕಾರ್ಯದರ್ಶಿ ರವಿ ಕೋಟ್ಯಾನ್, ಹಿರಿಯ ಕರಾಟೆ ಶಿಕ್ಷಕ ಸುರೇಶ್ ಕುಮಾರ್ ಶೆಟ್ಟಿ, ಕರಾಟೆ ಶಿಕ್ಷಕ ಸಂತೋಷ್ ಕುಮಾರ್ ಶೆಟ್ಟಿ, ಜಿಪಂ ಮಾಜಿ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ ಉಪಸ್ಥಿತರಿದ್ದರು. ನವೀನ್ ಅಂಬೂರಿ ನಿರೂಪಿಸಿದರು.
ರಾಜ್ಯ ಕರಾಟೆ ಶಿಕ್ಷಕರ ಸಂಘದ ಅಧ್ಯಕ್ಷ ಮುಹಮ್ಮದ್ ನದೀಮ್ ಹಾಗೂ ಸಂಘಟನಾ ಕಾರ್ಯದರ್ಶಿ ರಾಜೇಶ್ ಅಂಚನ್ ಪಂದ್ಯದ ತೀರ್ಪುಗಾರರಾಗಿದ್ದರು.
ಫಲಿತಾಂಶ: ರೆಡ್ ಕ್ಯಾಮೆಲ್ ಆಂಗ್ಲ ಮಾಧ್ಯಮ ಶಾಲೆ ಸಮಗ್ರ ಪ್ರಶಸ್ತಿ ಪಡೆಯಿತು. ದ ಯೆನೆಪೋಯ ಸ್ಕೂಲ್ ಮಂಗಳೂರು ದ್ವಿತೀಯ ಹಾಗೂ ತೃತೀಯ ಸ್ಥಾನವನ್ನು ಅಡ್ಯಾರಿನ ಬರಾಕ ಇಂಟರ್ನ್ಯಾಷನಲ್ ಶಾಲೆ ಪಡೆಯಿತು.