ಕಂಪಲಾಪುರ : ಗ್ರಾಮದ ವಿನಾಯಕ ಗೆಳೆಯರ ಬಳಗದ ವತಿಯಿಂದ ಗುರುವಾರ ರಾತ್ರಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಯಲ್ಲಿ ಕಂಪಲಾಪುರದ ಬಿಎಸ್ ಎಫ್ ತಂಡ ಪಾರಮ್ಯ ಮೆರೆದಿದೆ.
ಅಂತಿಮ ಪಂದ್ಯದಲ್ಲಿ ವಿನಾಯಕ ಗೆಳೆಯರ ಬಳಗದ ತಂಡದೊಂದಿಗೆ ತೀವ್ರ ಸೆಣಸಾಟ ನಡೆಸಿದ ಕಂಪಲಾಪುರದ ಬಿಎಸ್‌ಎಫ್ ಕ್ರೀಡಾಪಟುಗಳು ವಿಜಯದ ನಗೆ ಬೀರಿದರು. ಪ್ರಥಮ ಟ್ರೋಫಿ ಸಹಿತ 15, 000 ರೂ. ನಗದು ಬಹುಮಾನ ಪಡೆದರು. ಸತತ ಎರಡನೇ ವರ್ಷವೂ ಬಿಎಸ್‌ಎಫ್ ತಂಡ ಪ್ರಥಮ ಬಹುಮಾನ ಪಡೆದುಕೊಂಡಿರುವುದು ದಾಖಲೆಯಾಗಿದೆ. ಅತಿಥೇಯ ವಿನಾಯಕ ಗೆಳೆಯರ ಬಳಗ ದ್ವಿತೀಯ ( ಟ್ರೋಫಿ ಸಹಿತ 10, 000 ರೂ. ನಗದು), ಮಡಿಕೇರಿ ತಂಡ ತೃತೀಯ (ಟ್ರೋಫಿ ಸಹಿತ 5, 000 ರೂ. ನಗದು) ಬಹುಮಾನ ಪಡೆಯಿತು. ಕ್ರೀಡಾಕೂಟ ಆಯೋಜಕರಾದ ಭರತ್ ಗೌಡ , ಕೆ.ಆರ್.ವಿನಯ್, ಕೆ.ಆರ್ ರಿತೇಶ, ಕೆ.ಎಸ್. ಸಂಜಯ, ಹರ್ಷ ಇತರರು ಬಹುಮಾನ ವಿತರಣೆ ಮಾಡಿದರು. ರಾಜ್ಯದ ವಿವಿಧೆಡೆಯಿಂದ ಒಟ್ಟು 24 ತಂಡಗಳು ಪಂದ್ಯದಲ್ಲಿ ಭಾಗವಹಿಸಿದ್ದವು.