ಉಡುಪಿ ಜಿಲ್ಲಾ ಮಟ್ಟದ ಬಾಲಕ-ಬಾಲಕಿಯರ ಕರಾಟೆ ಪಂದ್ಯಾಟದಲ್ಲಿ ಪದಕಗಳನ್ನು ಪಡೆದ ಕುಂದಾಪುರ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು 
ಜಿಲ್ಲೆ

ವೆಂಕಟರಮಣ ಕಾಲೇಜು ರಾಜ್ಯಮಟ್ಟಕ್ಕೆ

ಇಂದಿರಾ ಎನ್ ಕೆ

ಕುಂದಾಪುರ: ಶಾಲಾ ಶಿಕ್ಷಣ ಇಲಾಖೆ ಮತ್ತು ಕಾರ್ಕಳ ಎಸ್‌ಎನ್‌ವಿ ಪದವಿ ಪೂರ್ವ ಕಾಲೇಜು ಜಂಟಿ ಆಶ್ರಯದಲ್ಲಿ ಕಾರ್ಕಳದಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಬಾಲಕ-ಬಾಲಕಿಯರ 50 ಕೆಜಿ ವಿಭಾಗದ ಕರಾಟೆ ಪಂದ್ಯಾಟದಲ್ಲಿ ಕುಂದಾಪುರ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ತರುಣ್ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

56 ಕೆಜಿ ವಿಭಾಗದಲ್ಲಿ ಕೆ.ಶ್ರೀನಿತಾ ಎಸ್. ಕಾಮತ್, 82 ಕೆಜಿ ವಿಭಾಗದಲ್ಲಿ ಅಕ್ಷಯ್ ಹಾಗೂ 62 ಕೆಜಿ ವಿಭಾಗದಲ್ಲಿ ಸಾವಿಯೋ ಬೆಳ್ಳಿ ಪದಕ ಪಡೆದು ಸಾಧನೆಗೈದಿದ್ದಾರೆ. ಸಾಧಕ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿ, ಪ್ರಾಂಶುಪಾಲ ಸಂದೀಪ್ ಗಾಣಿಗ, ಉಪ ಪ್ರಾಂಶುಪಾಲ ಸುಜಯ್ ಕೋಟೆಗಾರ್, ದೈಹಿಕ ಶಿಕ್ಷಣ ಉಪನ್ಯಾಸಕ ಕೃಷ್ಣ ಅಭಿನಂದಿಸಿದ್ದಾರೆ.