ಶ್ಯಾಮ್ ಜಿ. ಎನ್.ಪೂಜಾರಿ  
ಜಿಲ್ಲೆ

ಕೊಳಲು ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ

ಇಂದಿರಾ ಎನ್ ಕೆ

ಗಂಗೊಳ್ಳಿ: ಕರ್ನಾಟಕ ರಾಜ್ಯ ಬಾಲಭವನ ಸೊಸೈಟಿ, ಜಿಲ್ಲಾ ಬಾಲಭವನ ಸಮಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಾಲಾ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಉಡುಪಿ ಬ್ರಹ್ಮಗಿರಿಯ ಜಿಲ್ಲಾ ಬಾಲಭವನದಲ್ಲಿ ಗುರುವಾರ ನಡೆದ ಜಿಲ್ಲಾಮಟ್ಟದ ವಾದ್ಯ ಸಂಗೀತ (ಕೊಳಲು) ಸ್ಪರ್ಧೆಯಲ್ಲಿ ಗಂಗೊಳ್ಳಿ ಎಸ್.ವಿ. ಆಂಗ್ಲ ಮಾಧ್ಯಮ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಶ್ಯಾಮ್ ಜಿ.ಎನ್.ಪೂಜಾರಿ ಪ್ರಥಮ ಸ್ಥಾನ ಪಡೆದು, ಸತತ ಎರಡನೇ ಬಾರಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಗಂಗೊಳ್ಳಿಯ ಛಾಯಾಗ್ರಾಹಕ ಗಣೇಶ್ ಪೂಜಾರಿ ಮತ್ತು ಉಪನ್ಯಾಸಕಿ ಮಾಲತಿ ಗಣೇಶ್ ಪುತ್ರ.