ಜಿಲ್ಲೆ

ಲಕ್ಷ್ಮೇಶ್ವರದಲ್ಲಿ ರಾಜ್ಯ ಮಟ್ಟದ ಚೆಸ್ ಪಂದ್ಯಾವಳಿ 29ರಂದು

ವೀರೇಶ ಸೌದ್ರಿ

ಲಕ್ಷ್ಮೇಶ್ವರ: ಗದಗ ಜಿಲ್ಲೆಯ ಚೆಸ್ ಅಸೋಷಿಯೇಷನ್ ವತಿಯಿಂದ ಜೂ. 29ರಂದು ರಾಜ್ಯಮಟ್ಟದ ಚೆಸ್ ಪಂದ್ಯಾವಳಿ ಆಯೋಜಿಸಲಾಗಿದೆ ಅಸೋಸಿಯೇಷನ್ ಗೌರವಾಧ್ಯಕ್ಷ ರಾಮರಾವ್ ವೇರ್ಣೆಕರ ಹೇಳಿದರು.

ಪಟ್ಟಣದಲ್ಲಿ ಮಂಗಳವಾರ ಅಸೋಸಿಯೇಷನ್ ಸದಸ್ಯರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಮಕ್ಕಳಲ್ಲಿ ಈ ಆಟದ ಬಗ್ಗೆ ಹೆಚ್ಚಿನ ಆಸಕ್ತಿ ಮೂಡಿಸುವುದು ಅಸೋಷಿಯೇಷನ್ ಉದ್ದೇಶವಾಗಿದೆ. 14 ಹಾಗೂ 17 ವರ್ಷದೊಳಗಿನ ಮತ್ತು ಮುಕ್ತ ಚೆಸ್ ಪಂದ್ಯಾವಳಿ ನಡೆಯಲಿದೆ. ವಿಜೇತರಿಗೆ 50 ಸಾವಿರ ರೂ. ನಗದು ಬಹುಮಾನ ಹಾಗೂ 21 ಆಕರ್ಷಕ ಟ್ರೋಫಿ ನೀಡಲಾಗುವುದು ಎಂದರು.

ಅಸೋಷಿಯೇಷನ್ ಜಿಲ್ಲಾ ಅಧ್ಯಕ್ಷ ಗಿರೀಶ ಅಗಡಿ ಮಾತನಾಡಿ, 29ರಂದು ಪಟ್ಟಣದ ಲಕ್ಷ್ಮೇಶ್ವರ ಬಾಳಿಹಳ್ಳಿಮಠ ಕಲ್ಯಾಣ ಮಂಟಪದಲ್ಲಿ ಸ್ಪರ್ಧೆ ಆಯೋಜಿಸಲಾಗಿದೆ. ಪ್ರಾಥಮಿಕ ಮತ್ತು ಪ್ರೌಢಶಾಲೆ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿ ರಾಜ್ಯ, ರಾಷ್ಟ್ರಮಟ್ಟದವರೆಗೂ ಜಿಲ್ಲೆಗೆ ಕೀರ್ತಿ ತರಬೇಕು ಎನ್ನುವ ಉದ್ದೇಶವನ್ನು ಹಂತ ಹಂತವಾಗಿ ನಡೆಸುತ್ತಿದೆ. ಈಗಾಗಲೇ ಹಲವಾರು ಮಕ್ಕಳು ರಾಷ್ಟ್ರಮಟ್ಟದವರೆಗೂ ಸಾಧನೆ ಮಾಡಿದ್ದು ಅಸೋಷಿಯೇಷನ್‌ನ ಹೆಮ್ಮೆಯಾಗಿದೆ. ಈ ಹಿಂದೆ ಸಂಘಟಿಸಿದ್ದ ಎಲ್ಲ ಪಂದ್ಯಾವಳಿಗಳು ಯಶಸ್ವಿಯಾಗಿದ್ದು ಈ ಬಾರಿಯೂ ಯಶಸ್ವಿಗೊಳಿಸಲು ಎಲ್ಲರೂ ಸಹಕಾರ ನೀಡುವ ವಿಶ್ವಾಸವಿದೆ ಎಂದರು.

ಶಿಕ್ಷಕ ಎಂ.ಐ. ಕಣಕೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ಎಸ್.ಎಂ. ಉಮ್ಮಣ್ಣವರ, ಎಎಸ್‌ಐ ಎನ್.ಎ. ಮೌಲ್ವಿ, ಆದೇಶ ಹುಲಗೂರ, ಮಂಜುನಾಥ ಅಂಗಡಿ, ಎ.ಜಿ. ಬೂದಿಹಾಳ, ಶ್ರೀಕಾಂತ ಪೂಜಾರ, ರಮೇಶ ಗಾಂಜಿ, ಎಸ್.ಪಿ. ಕಟ್ಟೆಣ್ಣವರ ಮುಂತಾದವರಿದ್ದರು.