RAICHUR 
ಜಿಲ್ಲೆ

ಜು.5 ರಂದು ರಾಜ್ಯ ಮಟ್ಟದ ರಸಕೌಶಲ್ಯ ಪ್ರಾತ್ಯಕ್ಷಿಕ ಕಾರ್ಯಾಗಾರ

Raichur - Reporter - Rachhai Swamy

ರಾಯಚೂರು ರಸಶಾಸ್ತ್ರ ಮತ್ತು ಬೈಷಜ್ಯ ಕಲ್ಪನಾ ವಿಭಾಗದ ವತಿಯಿಂದ ಜು.5 ರಂದು ಒಂದು ದಿನದ ರಾಜ್ಯ ಮಟ್ಟದ ರಸಕೌಶಲ್ಯ ಪ್ರಾತ್ಯಕ್ಷಿಕ ಕಾರ್ಯಾಗಾರವನ್ನು ಬೆಳಗ್ಗೆ 9: 30 ರಿಂದ ಸಂಜೆ 5 ಗಂಟೆವರೆಗೆ ನಗರದ ಪೂರ್ಣಿಮಾ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದೆಂದು ಕಾಲೇಜಿನ ಪ್ರಾಚಾರ್ಯ ಡಾ. ಚಂದ್ರಶೇಖರರೆಡ್ಡಿ ಕರಮುಡಿ ಹೇಳಿದರು.

ಪೂರ್ಣಿಮಾ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೂರ್ಣಿಮಾ ಎಜುಕೇಷನ್ ಟ್ರಸ್ ಅಧ್ಯಕ್ಷ ಎಸ್.ಎಲ್ ಕೇಶವರೆಡ್ಡಿ ಅವರು ವಹಿಸುವರು. ಕಾರ್ಯಕ್ರಮದ ಉದ್ಘಾಟಕರಾಗಿ ಗಂಗಾವತಿಯ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಮತ್ತು ಸ್ಪೂರ್ತಿ ಆಯುರ್ವೇದ ಮಹಾವಿದ್ಯಾಲಯ ಸದಸ್ಯ ಡಾ.ಬಿ.ಎಸ್ ಸವಡಿ ಸೆನೆಟ್ ಆಗಮಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಜಿಲ್ಲಾ ಆಯುಷ್ ಅಧಿಕಾರಿ ಡಾ. ಶಂಕರಗೌಡ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಬಿಪಿಎಸ್ ಸದಸ್ಯ ಡಾ.ಮಹೇಶ್ವರ್ ಸ್ವಾಮಿ ಕೆ.ಹಿರೇಮಠ, ಬಾಗಲಕೋಟೆಯ ಎಂಆರ್‌ಎನ್ ಆಯುರ್ವೇದ ಮಹಾವಿದ್ಯಾಲಯ ಡೀನ್. ಡಾ. ಶಿವುಕುಮಾರ ಗಂಗಲ್, ಪೂರ್ಣಿಮಾ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಯಾಲಯ ಪ್ರಾಚಾರ್ಯ ಡಾ.ಚಂದ್ರಶೇಖರರಡ್ಡಿ ಕರಮುಡಿ ಸೇರಿ ಇತರರು ಉಪಸ್ಥಿತರಿರುವರು ಎಂದರು.

ಕಾರ್ಯಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ಬೆಳಗಾವಿಯ ಜಿಎಸ್‌ಎಸ್ ಕಾಲೇಜಿನ ಡಾ. ಪ್ರಮೋದ, ಶ್ರೀ ಸೂರಜ್ ಮೆನೆ ಮತ್ತು ಸಾಗರ ಎಮ್. ತರಬೇತಿ ನೀಡುವರು. ಈ ಕಾರ್ಯಾಗಾರದಲ್ಲಿ ರಾಜ್ಯದ ವಿವಿಧ ಆಯುರ್ವೇದ ಮಹಾವಿದ್ಯಾಯಲಗಳಿಂದ ಉಪನ್ಯಾಸಕರು, ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ವೃತ್ತಿ ನಿರತ ವೈದ್ಯರು ಸೇರಿ ಸುಮಾರು 300ಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವರು ಎಂದರು.

ಈ ಸಂದರ್ಭದಲ್ಲಿ ಡಾ.ನಂದಾ, ಡಾ. ಪ್ರತ್ಯುಶಾ, ಡಾ. ನಾಗಲಾಂಭಿಕ ಇದ್ದರು.