ಹೆಬ್ಬಾಲೆ ಗ್ರಾಮದಲ್ಲಿ ಗ್ರಾಮ ದೇವತೆ ಶ್ರೀ ಬನಶಂಕರಿ ದೇವಿ ಜಾತ್ರೋತ್ಸವದ ಅಂಗವಾಗಿ ರಾಜ್ಯ ಮಟ್ಟದ ಎತ್ತಿನ ಗಾಡಿ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಗಾಡಿಗಳು. 
ಜಿಲ್ಲೆ

ನಾಳೆಯಿಂದ ರಾಜ್ಯಮಟ್ಟದ ಎತ್ತಿನಗಾಡಿ ಓಟದ ಸ್ಪರ್ಧೆ

ಅವಿನಾಶ್ ಜೈನಹಳ್ಳಿ

ಮೈಸೂರು: ನಗರದ ಕುಂಬಾರ ಕೊಪ್ಪಲಿನ ಕೆಂಪೇಗೌಡ ಯುವಕರ ಬಳಗದ ವತಿಯಿಂದ ಜ.20 ಮತ್ತು 22 ರಂದು ಬೆಳಗ್ಗೆ 10 ರಿಂದ ರಾತ್ರಿ 10.30ರವರೆಗೆ ನಗರದ ಮರಟಿಕ್ಯಾತನಹಳ್ಳಿ ಬಳಿ ರಾಜ್ಯಮಟ್ಟದ ಎತ್ತಿನಗಾಡಿ ಓಟದ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಸಾಹಿತಿ ಬನ್ನೂರು ಕೆ.ರಾಜು ತಿಳಿಸಿದರು.

ಗ್ರಾಮೀಣ ಕ್ರೀಡೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಬಳಗ ಈ ಸ್ಪರ್ಧೆ ಆಯೋಜಿಸಿದೆ. ಪ್ರಥಮ ಮತ್ತು ದ್ವಿತೀಯ ಬಹುಮಾನವಾಗಿ ಬೈಕ್, ತೃತೀಯ ಬಹುಮಾನವಾಗಿ 30 ಸಾವಿರ, ನಾಲ್ಕನೇ ಬಹುಮಾನವಾಗಿ 20 ಸಾವಿರ ರೂ. ನೀಡಲಾಗುವುದು. ರಾಜ್ಯದ ವಿವಿಧೆಡೆಯಿಂದ ಸ್ಪರ್ಧಿಗಳು ಭಾಗವಹಿಸಲಿದ್ದಾರೆಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಶಾಸಕರಾದ ಜಿ.ಟಿ.ದೇವೇಗೌಡ, ಕೆ.ಹರೀಶ್‌ಗೌಡ, ಜಿ.ಡಿ.ಹರೀಶ್‌ಗೌಡ, ನಟ ಚಿಕ್ಕಣ್ಣ, ಮಾಜಿ ಶಾಸಕ ಎಲ್.ನಾಗೇಂದ್ರ, ಕಾಂಗ್ರೆಸ್ ಮುಖಂಡ ರಾಕೇಶ್ ಪಾಪಣ್ಣ, ಬಿಜೆಪಿ ಮುಖಂಡ ಕವೀಶ್‌ಗೌಡ ಭಾಗವಹಿಸಲಿದ್ದಾರೆ ಎಂದರು. ಕಾಂಗ್ರೆಸ್ ಮುಖಂಡ ಡಾ.ಸುಶ್ರುತ್‌ಗೌಡ, ಶ್ರೇಯಸ್, ಹರ್ಷಿತ್ ಹಾಜರಿದ್ದರು.