ಜಿಲ್ಲೆ

ರಾಜ್ಯಮಟ್ಟದ ಅಂಧರ ಚೆಸ್: ಬಸಲಿಂಗಪ್ಪ ಪ್ರಥಮ

reportermys

ಮೈಸೂರು: ಜಾಣ್ಮೆಯುತ ಆಟ ಪ್ರದರ್ಶಿಸಿದ ರಾಯಚೂರಿನ ಬಸಲಿಂಗಪ್ಪ ಮರಡ್ಡಿ ರಾಜ್ಯಮಟ್ಟದ ಅಂಧರ ಚೆಸ್ ಚಾಂಪಿಯನ್‌ಷಿಪ್ ಮುಕ್ತ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದರು.
ಲರ್ನರ್ಸ್‌ ಚೆಸ್ ಕ್ಲಬ್, ಕರ್ನಾಟಕ ರಾಜ್ಯ ಒಕ್ಕಲಿಗ ವಿಕಾಸ ವೇದಿಕೆ ಮತ್ತು ಕೆಎಸ್‌ಸಿಎವಿಸಿ ಸಹಯೋಗದಲ್ಲಿ ವಿನಾಯಕನಗರದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಮುಕ್ತಾಯಗೊಂಡ ಚಾಂಪಿಯನ್‌ಷಿಪ್ ಮುಕ್ತ ವಿಭಾಗದಲ್ಲಿ ಒಟ್ಟು 7 ಅಂಕಪಡೆದು ಈ ಸಾಧನೆ ಮಾಡಿದರು. 6 ಸಾವಿರ ರೂ. ನಗದು ಬಹುಮಾನದ ಜೊತೆಗೆ ಪ್ರಶಸ್ತಿ ಪಡೆದುಕೊಂಡರು.


ಏಳು ಅಂಕಗಳಿಸಿದ್ದ ಕಲಬುರಗಿಯ ಕಿರಣಕುಮಾರ್ ದ್ವಿತೀಯ ಸ್ಥಾನದೊಂದಿಗೆ 4 ಸಾವಿರ ರೂ. ನಗದು ಪಡೆದರು. 6.5 ಅಂಕಗಳಿಸಿದ್ದ ಧಾರವಾಡದ ಎನ್.ಎಂ.ಶಿವನಗೌಡ ತೃತೀಯ ಸ್ಥಾನದೊಂದಿಗೆ 3 ಸಾವಿರ ನಗದು ಬಹುಮಾನ ಗಳಿಸಿದರು. ರಾಯಚೂರಿನ ಕೆಂಚಪ್ಪ ನಾಲ್ಕನೇ (2.5 ಸಾವಿರ) ಹಾಗೂ ಬೆಂಗಳೂರಿನ ಜಿ.ಎಚ್.ಸಾಗರ್(2 ಸಾವಿರ ರೂ.) ಐದನೇ ಸ್ಥಾನ ಗಳಿಸಿದರು.
ಮೈಸೂರಿನ ಲಿಂಗರಾಜು, ಎಚ್.ಸಿ.ಹನುಮಂತರಾಯಪ್ಪ, ವಿಜಯಪುರದ ಖಾದಿರ್, ಮೈಸೂರಿನ ಎನ್.ನಟರಾಜು, ಕಲಬುರಗಿಯ ಲಕ್ಷ್ಮಿಕಾಂತ್ ಎನ್.ಸಿಂಪಿ, ಯಾದಗಿರಿಯ ರವಿಕಿರಣ್, ಮೈಸೂರಿನ ಕೆ.ಎಸ್.ನಾಗರಾಜ, ಚಿಕ್ಕಬಳ್ಳಾಪುರದ ಕೇಶವಮೂರ್ತಿ, ಚಿತ್ರದುರ್ಗದ ರಘುನಾಥ್ ನಂತರದ ಸ್ಥಾನ ಪಡೆದರು.

ಮಲ್ಲೇಶ್ ಪ್ರಥಮ:
ಜೂನಿಯರ್ ವಿಭಾಗದಲ್ಲಿ 5.5 ಅಂಕಗಳೊಂದಿಗೆ ರಾಯಚೂರಿನ ಮಲ್ಲೇಶ್ ಪ್ರಥಮ ಸ್ಥಾನ ಪಡೆದರು. ವಿಜಯಪುರದ ಕುಶಾಲ್ ರಾಮಣ್ಣ ಜಗಲಿ 5 ಅಂಕಗಳೊಂದಿಗೆ ಎರಡನೇ ಹಾಗೂ ಬೀದರ್‌ನ ಪಿ.ಅವಿನಾಶ್ 5 ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆದರು. ಬೆಳಗಾವಿಯ ಸಿದ್ದಪ್ಪ ತೋರಣಗಟ್ಟಿ, ಪ್ರವೀಣ್ ಕುಮಾರ್ ನರಗುಂದ, ಗದಗದ ಎಂ.ನವೀನ್ ಮೆರವಾಡೆ, ಬೆಂಗಳೂರಿನ ಎನ್.ವಜ್ರೇಶ್, ಮೈಸೂರಿನ ಗಂಗಾಧರ್, ರಾಯಚೂರಿನ ಜನಾರ್ಧನ್ ನಂತರದ ಸ್ಥಾನಪಡೆದರು. ಮಹಿಳಾ ವಿಭಾಗದಲ್ಲಿ 4.5 ಅಂಕಗಳಿಸಿದ್ದ ರಾಯಚೂರಿನ ಶಾಹಿಸ್ತಾ ಬೇಗಂ ಪ್ರಥಮ ಸ್ಥಾನ ಪಡೆದರು. ಬೆಂಗಳೂರಿನ ಕೆ.ಎಸ್.ಶೀಲವತಿ, ರಾಯಚೂರಿನ ಶಿವಲಿಂಗಮ್ಮ, ನಾಗಮ್ಮ, ಬೆಂಗಳೂರಿನ ಜ್ಯೋತಿ ನಂತರದ ಸ್ಥಾನ ಪಡೆದರು.