ಚಿಕ್ಕಬಳ್ಳಾಪುರ: ಉತ್ತಮ ಸಾಧನೆಗೆ ಶಿಡ್ಲಘಟ್ಟ ನಗರಸಭೆಗೆ ರಾಜ್ಯ ಮಟ್ಟದ ಪ್ರಶಸ್ತಿ ಲಭಿಸಿದೆ. ಬೆಂಗಳೂರಿನಲ್ಲಿನ ವಿಕಾಸ ಸೌಧದಲ್ಲಿ ಜಿಲ್ಲಾ ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಅಧಿಕಾರಿ ಎಂ.ಪ್ರಸಾದ್, ಜಿಲ್ಲಾ ಕೌಶಲಾಭಿವೃದ್ದಿ ಅಧಿಕಾರಿ ವೆಂಕಟಾಚಲಪತಿ, ಪೌರಾಯುಕ್ತ ಮಂಜುನಾಥ್, ಸಮುದಾಯ ಸಂಘಟಕಿ ಕೆ.ಎಂ.ಸುಧಾಗೆ ವೈದ್ಯಕಿಯ ಶಿಕ್ಷಣ ಹಾಗೂ ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಸಚಿವ ಡಾ. ಶರಣ ಪ್ರಕಾಶ ರುದ್ರಪ್ಪ ಪಾಟೀಲ್ ಪ್ರಶಸ್ತಿಯನ್ನು ನೀಡಿ, ಮೆಚ್ಚುಗೆ ವ್ಯಕ್ತಪಡಿಸಿದರು. ಇಲಾಖೆಯ ಅಭಿವೃದ್ದಿ ಆಯುಕ್ತೆ ಹಾಗೂ ಅಪರ ಕರ‍್ಯರ‍್ಶಿ ಉಮಾ ಮಹದೇವನ್, ಅಭಿಯಾನ ನರ‍್ದೇಶಕಿ ಪಿ.ಐ.ಶ್ರೀ ವಿದ್ಯಾ ಮತ್ತಿತರರು ಇದ್ದರು. ರಾಷ್ಟ್ರೀಯ ಜೀವನೋಪಾಯ ಅಭಿಯಾನದಡಿಯ ಪಿಎಂ ಸ್ವ-ನಿಧಿ ಯೋಜನೆಯಡಿ ಬೀದಿ ಬದಿ ವ್ಯಾಪಾರಸ್ಥರಿಗೆ ಸಾಲವನ್ನು ನೀಡುವುದರಲ್ಲಿ ಶೇ.140 ರಷ್ಟು ಗುರಿ ಸಾಧಿಸಿರುವ ಹಿನ್ನೆಲೆಯಲ್ಲಿ ಶಿಡ್ಲಘಟ್ಟ ನಗರಸಭೆಗೆ ಪ್ರಶಸ್ತಿ ಸಿಕ್ಕಿದೆ.