ಕಾರವಾರ: ಐದನೇ ರಾಜ್ಯ ಮಟ್ಟದ ಅಬಾಕಸ್ ಹಾಗೂ ವೇದಿಕ್ ಮೆಥಮೆಟಿಕ್ಸ್ ಸ್ಪರ್ಧೆಯನ್ನು ಜ.27 ರಂದು ನಗರದ ಅಜ್ವಿ ಹಾಲ್ ನಲ್ಲಿ ನಡೆಯಲಿದೆ ಎಂದು ನರಹರಿ ಬೋರ್ಕರ್ ತಿಳಿಸಿದರು.
ಅಂದು ಬೆಳಗ್ಗೆ 9 ಗಂಟೆಗೆ ಉದ್ಘಾಟನೆ ನಡೆಯಲಿದ್ದು, ಶಾಸಕ ಸತೀಶ ಸೈಲ್ ಸ್ಪರ್ಧೆ ಉದ್ಘಾಟಿಸಲಿದ್ದಾರೆ. ಎಂಎಲ್ ಸಿ ಗಣಪತಿ ಉಳ್ವೇಕರ್ ಅತಿಥಿಯಾಗಿರುವರು.
ಪ್ರೊಪಾತ್ ಅಕಾಡೆಮಿಯಿಂದ ಸ್ಪರ್ಧೆ ನಡೆಯಲಿದ್ದು, ರಾಜ್ಯದ ವಿವಿಧ ಜಿಲ್ಲೆಗಳಿಂದ 500 ವಿದ್ಯಾರ್ಥಿಗಳು ಭಾಗವಹಿಸುವ ಸಾಧ್ಯತೆ ಇದೆ. ಕಿರಿಯರ ವಿಭಾಗದಲ್ಲಿ 5 ನಿಮಿಷ, ಹಿರಿಯರ ವಿಭಾಗದಲ್ಲಿ 10 ನಿಮಿಷ ಸ್ಪರ್ಧೆಗಳು ನಡೆಯಲಿವೆ.
ಸಾಯಂಕಾಲ 4 ಗಂಟೆಗೆ ಬಹುಮಾನ ವಿತರಣಾ ಸಮಾರಂಭ ನಡೆಯಲಿದೆ. ಬೆಂಗಳೂರಿನ ವಿಜ್ಞಾನಿ ವೈಭವ ಜಿ.ಆರ್., ಡಿಡಿಪಿಐ ಲತಾ ನಾಯಕ, ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜ್ ನ ಪ್ರಾಂಶುಪಾಲೆ ಅತಿಥಿಯಾಗಿರುವರು.
2018 ರಲ್ಲಿ ಪ್ರೊಪಾತ್ ಅಕಾಡೆಮಿ ಪ್ರಾರಂಭವಾಗಿದ್ದು, 22 ಶಾಲೆಗಳಲ್ಲಿ ಕರಿಕ್ಯುಲಂ ಆಗಿ ಅಬಾಕಸ್, ವೇದಿಕ್ ಮೆಥಮೆಟಿಕ್ಸ್, ಕಲಿಯುತ್ತಿದ್ದಾರೆ. ಅಬಾಕಸ್ ನಿಂದ ಜ್ಞಾಪಕ ಶಕ್ತಿ ಹೆಚ್ಚುತ್ತದೆ. ವೇದಿಕ್ ಮೆಥಮೆಟಿಕ್ಸ್ ನಿಂದ ಮಕ್ಕಳು ಕೆಲೆಕ್ಯುಲೇಟರ್ ಗಿಂತ ವೇಗವಾಗಿ ಲೆಕ್ಕ ಮಾಡುವುದನ್ನು ಕಲಿಯಲಿದ್ದಾರೆ ಎಂದರು. ಸಾವಿತ್ರಿ ಮತ್ತು ನಂದಿತಾ ಸುದ್ದಿಗೋಷ್ಠಿಯಲ್ಲಿದ್ದರು.