ಜಿಲ್ಲೆ

ಲಾರಿ ಮಾಲೀಕರ ರಾಜ್ಯಮಟ್ಟದ ಸಮಾವೇಶ ಜು.9 ರಂದು

Gadag - Shivanand Hiremath

ವಿಜಯವಾಣಿ ಸುದ್ದಿಜಾಲ ಗದಗ
ಲಾರಿ ಮಾಲೀಕರ ರಾಜ್ಜಮಟ್ಟದ 32ನೇ ಸಭೆಯನ್ನು ಗದಗ ಜಿಲ್ಲೆಯ ಕೆ.ಎಚ್​. ಪಾಟೀಲ ಸಭಾಭವನದಲ್ಲಿ ಜು.9 ರಂದು ಬೆಳಗ್ಗೆ 10.30 ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಲಾರಿ ಮಾಲೀಕರ ಸಂದ ರಾಜ್ಯಾಧ್ಯಕ್ಷ ನವೀನ ರೆಡ್ಡಿ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಭೆಯಲ್ಲಿ ಲಾರಿ ಮಾಲೀಕರ ಸಮಸ್ಯೆಗಳ ಬಗ್ಗೆ ಚಚಿರ್ಸಲಾಗುವುದು. ಹೆದ್ದಾರಿಗಳಲ್ಲಿ ಲಾರಿ ಪಾಕಿರ್ಂಗ್​ ವ್ಯವಸ್ಥೆ. ರ್ಟಮಿನಲ್​ ಗಳ ವ್ಯವಸ್ಥೆ, ಲಾರಿ ಚಾಲಕರಿಗೆ ಹೆದ್ದಾರಿಗಳಲ್ಲಿ ಶೌಚಾಲಯಗಳ ವ್ಯವಸ್ಥೆ ಬೇಡಿಕೆಗೆ ಒತ್ತಾಯಿಸಲಾಗುವುದು. ಮುಖ್ಯವಾಗಿ ಆರ್​ಟಿಒ ಗಳಿಂದ ಓವರ್​ ಲೋಡ್​ ದಂಡ ವಿಧಿಸಲಾಗುತ್ತಿದೆ. ಲೋಡ್​ ಮಾಡುವವರಿಗೆ, ಲೋಡ್​ ಇಳಿಸಿಕೊಳ್ಳುವ ಗ್ರಾಹಕರಿಂದ ದಂಡ ವಿಧಿಸುವ ನಿಯಮವಿದ್ದರೂ ದಂಡದ ಭಾರವನ್ನು ಲಾರಿ ಮಾಲೀಕರ ಮೇಲೆ ಹೇರಲಾಗುತ್ತಿದೆ. ಈ ಬಗ್ಗೆ ಚಾಲಕರಿಗೆ ಅರಿವೂ ಮೂಡಿಸಲಾಗುವುದು ಮತ್ತು ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.
ಲಾರಿ ಅಪಘಾತದ ಕುರಿತು ಮಾತನಾಡಿದ ಅವರು, ಸ್ಥಳ ವೀಕ್ಷಣೆ ಮಾಡಿ ಆದಷ್ಟು ಬೇಗ ಲಾರಿಯನ್ನು ಪೊಲೀಸ್​ ಇಲಾಖೆ ಬಿಡುಗಡೆ ಮಾಡಬೇಕು.ಆದರೂ ಕಿರುಕಳ ನೀಡಲಾಗುತ್ತದೆ ಇಂತಹ ಸಮಸ್ಯೆಗಳ ಬಗ್ಗೆ ಚಚಿರ್ಸಲಾಗುವುದು ಎಂದರು.
ಕಾಮಿರ್ಕ ಇಲಾಖೆಯಿಂದ ಲಾರಿ ಚಾಲಕ ಮತ್ತು ನಿರ್ವಾಹಕರು ವಿಮೆ ಕುರಿತು ಗಮನ ಸೆಳೆಯಲಾಗುವುದು ಎಂದರು.
ಶ್ರೀನಿವಾಸ ರಾವ, ನಾರಾಯಣ ಪ್ರಸಾದ, ನವೀನ ಅಕ್ಕಿ ಇತರರು ಇದ್ದರು.