ಬೆಂಗಳೂರು: ಕಳರಿಪಯಟ್ಟು ಫೆಡರೇಷನ್ ಇತ್ತೀಚೆಗೆ ಆಯೋಜಿಸಿದ್ದ 15ನೇ ರಾಷ್ಟ್ರೀಯ ಕಳರಿಪಯಟ್ಟು ಚಾಂಪಿಯನ್ಶಿಪ್ನಲ್ಲಿ ಕರ್ನಾಟಕ ತಂಡವು ಎರಡನೇ ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ. ಪುರಷರ ವಿಭಾಗದ ಕತ್ತಿ ಮತ್ತು ಗುರಾಣಿ ಸ್ಪರ್ಧೆಯಲ್ಲಿ ರಾಜ್ಯದ ಎ.ಎಂ. ಬಿನೀಷ್ ಮತ್ತು ಹರಿನಾಥ್ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.
ಸಬ್ ಜೂನಿಯರ್ ಬಾಲಕಿಯರ ಮೇಪಯೆಟ್ ವಿಭಾಗದಲ್ಲಿ ಧಾತ್ರಿ ಬೆಳ್ಳಿ ಹಾಗೂ ಜೂನಿಯರ್ ಬಾಲಕಿಯರ ವಿಭಾಗದಲ್ಲಿ ರಂಜಿನಿ ಕಂಚಿನ ಪದಕ ಗೆದ್ದಿದ್ದಾರೆ.
ಪುರುಷರ ನೆಡುವಡಿ ಪಿಯಾಟ್ ವಿಭಾಗದಲ್ಲಿ ಎ.ಎಂ. ಬಿನೀಷ್ ಮತ್ತು ಹರಿನಾಥ್ ಬೆಳ್ಳಿ ಪದಕ ಪಡೆದರೆ, ಪಿ. ಅಜಿತ್ ಮತ್ತು ರೋಶನ್ ರೊಮಾರಿಯೊ ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಚುವಟ್ಟು ವಿಭಾಗದಲ್ಲಿ ತಂಕಾ ಸಲ್ವಂ ಮತ್ತು ಪಿ. ಅಜಿತ್ ಹಾಗೂ ಉರುಮಿ ವೀಸಲ್ ವಿಭಾಗದಲ್ಲಿ ಸಿ. ಜಿತು ಕಂಚಿನ ಪದಕ ಗೆದ್ದಿದ್ದಾರೆ. ಸ್ಪರ್ಧೆಯಲ್ಲಿ ವಿವಿಧ ರಾಜ್ಯಗಳಿಂದ 700ಕ್ಕೂ ಅಧಿಕ ಸ್ಪರ್ಧಾಳುಗಳು ಭಾಗವಹಿಸದ್ದರು.