ಉಡುಪಿ: ಗ್ಯಾರೆಂಟಿ ಯೋಜನೆಗಳಿಂದ ಕರ್ನಾಟಕದ ಜಿಡಿಪಿ ಮೊದಲನೇ ಸ್ಥಾನದಲ್ಲಿದ್ದು, ಮಹಿಳೆಯರ ಆರ್ಥಿಕಸ್ಥಿತಿಯಲ್ಲಿ ಶೇ.12ರಷ್ಟು ವೃದ್ಧಿಯಾಗಿದೆ. ಹೀಗಾಗಿ ರಾಜ್ಯದಲ್ಲಿ ಗ್ಯಾರಂಟಿ ಯೋಜನೆ ಯಾವ ಕಾರಣಕ್ಕೂ ನಿಲ್ಲುವುದಿಲ್ಲ. 4 ಲಕ್ಷ ಕೋಟಿ ರೂ. ರಾಜ್ಯ ಬಜೆಟ್ಗೆ 57 ಸಾವಿರ ಕೋಟಿ ರೂ. ಹೊರೆಯಲ್ಲ ಎಂದು ರಾಜ್ಯ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯ ಎಚ್.ಎಂ.ರೇವಣ್ಣ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಕ್ತಿ ಯೋಜನೆಯಲ್ಲಿ 397 ಕೋಟಿ ಟಿಕೇಟ್ಗಳಿಗೆ 9,665 ಕೋಟಿ ರೂ. ನೀಡಲಾಗಿದೆ. ಅನ್ನಭಾಗ್ಯ ಯೋಜನೆಯಲ್ಲಿ ಪ್ರತಿ ಕುಟುಂಬಕ್ಕೆ 170 ರೂ. ನಂತೆ 10,452 ಕೋಟಿ ರೂ. ನೀಡಲಾಗಿದೆ. ಗೃಹಜ್ಯೋತಿ ಯೋಜನೆಯಲ್ಲಿ 1.63 ಕೋಟಿ ಲಾನುಭವಿಗಳಿಗೆ 12,589 ಕೋಟಿ ರೂ. ವ್ಯಯಿಸಲಾಗಿದೆ. ಗೃಹಲಕ್ಷಿ$್ಮ ಯೋಜನೆಯಲ್ಲಿ 1.22 ಕೋಟಿ ಯಜಮಾನಿಯರಿಗೆ 35,180 ಕೋಟಿ ರೂ. ಒದಗಿಸಲಾಗಿದೆ. ಯುವನಿಧಿ ಯೋಜನೆಯಲ್ಲಿ 2.51 ಲಕ್ಷ ನಿರುದ್ಯೋಗಿಗಳಿಗೆ 228 ಕೋಟಿ ರೂ. ನೀಡಲಾಗಿದೆ ಎಂದರು.
4966 ಅರ್ಜಿ ಪರಿಶೀಲನೆ
ಗೃಹಲಕ್ಷಿ$್ಮ ಯೋಜನೆಯಲ್ಲಿ 2,24,348 ಮಂದಿಗೆ 648.52 ಕೋಟಿ ರೂ. ಖಾತೆಗೆ ಜಮೆ ಮಾಡಲಾಗಿದೆ. ಜಿಎಸ್ಟಿ ಪಾವತಿ ಹಾಗೂ ಆದಾಯ ತೆರಿಗೆ ಪಾವತಿ ಹಿನ್ನೆಲೆಯಲ್ಲಿ 4966 ಅರ್ಜಿಗಳು ತಿರಸತಗೊಂಡಿದ್ದು, ನೈಜಲಾನುಭವಿಗಳನ್ನು ಪರಿಶೀಲಿಸಿ ಹಣ ಪಾವತಿಸಲಾಗುವುದು. ಗೃಹಜ್ಯೋತಿ ಯೋಜನೆಯಲ್ಲಿ 339305 ಮಂದಿಗೆ 342.16 ಕೋಟಿ ರೂ., ಅನ್ನಭಾಗ್ಯ ಯೋಜನೆಯಲ್ಲಿ 202 ಕೋಟಿ ರೂ. , ಶಕ್ತಿ ಯೋಜನೆಯಲ್ಲಿ 2.16 ಕೋಟಿ ಟಿಕೆಟ್ಗಳಿಗೆ 80.45 ಕೋಟಿ ರೂ. , ಯುವನಿಧಿಯಲ್ಲಿ 3494 ನಿರುದ್ಯೋಗಿಗಳಿಗೆ 3.75 ಕೋಟಿ ರೂ. ನೀಡಲಾಗಿದೆ. ಪ್ರತಿ ಕುಟುಂಬಕ್ಕೆ ತಿಂಗಳಿಗೆ ಕನಿಷ್ಠ 5 ಸಾವಿರ ರೂ. ಪ್ರಯೋಜನವಾಗುತ್ತಿದೆ ಎಂದು ಮಾಹಿತಿ ನೀಡಿದರು.
ಕರ್ನಾಟಕದ ಗ್ಯಾರಂಟಿ ಯೋಜನೆಯಿಂದ ಪ್ರೇರಿತರಾದ ಬಿಜೆಪಿಯವರು ಅವರ ಆಡಳಿತವಿರುವ ರಾಜ್ಯಗಳಲ್ಲಿ ಜಾರಿಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಜನರಿಗೆ ಯೋಜನೆಗಳ ಪ್ರಯೋಜನ ಸಿಗಬೇಕೆಂಬುವುದೇ ಕಾಂಗ್ರೆಸ್ ಉದ್ದೇಶವಾಗಿದೆ. ಮುಂದಿನ ದಿನದಲ್ಲಿ ಗ್ರಾಮ ಮಟ್ಟದಲ್ಲಿ ಗ್ಯಾರೆಂಟಿ ಸಮಾವೇಶಗಳನ್ನು ಆಯೋಜಿಸಲಾಗುವುದು ಎಂದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಡಾ. ಪುಷ್ಪಾ ಅಮರನಾಥ್, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಗ್ಯಾರೆಂಟಿ ಸಮಿತಿ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಪ್ರಮುಖರಾದ ಎಂ.ಎ.ಗಫೂರ್, ಪ್ರಶಾಂತ್ ಜತ್ತನ್ನ ಮೊದಲಾದವರು ಉಪಸ್ಥಿತರಿದ್ದರು.