ಜಿಲ್ಲೆ

ಡಿಜಿಟಲ್ ಆರ್ಥಿಕತೆಗೆ ವೃದ್ಧಿಯಲ್ಲಿ ರಾಜ್ಯ ಸರ್ಕಾರದ ಬದ್ಧತೆ ಅಚಲ: ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್

ಮೈಸೂರು: ಡಿಜಿಟಲ್ ಆರ್ಥಿಕತೆಯ ಮಿತಿಯಿಲ್ಲದ ಸಾಮರ್ಥ್ಯವನ್ನು ಬಳಸಿಕೊಳ್ಳುವ ವಿಚಾರದಲ್ಲಿ ರಾಜ್ಯ ಸರ್ಕಾರದ ಬದ್ಧತೆ ಅಚಲವಾಗಿದೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದರು.

ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ನವೆಂಬರ್‌ನಲ್ಲಿ ಹಮ್ಮಿಕೊಂಡಿರುವ ಬೆಂಗಳೂರು ತಂತ್ರಜ್ಞಾನ ಸಮಾವೇಶಕ್ಕೆ ಪೂರ್ವಭಾವಿಯಾಗಿ ಸಾಂಸ್ಕೃತಿಕ ನಗರಿಯಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ದಿ ಬಿಗ್ ಟೆಕ್ ಶೋನಲ್ಲಿ ಗುರುವಾರ ವರ್ಚ್ಯುವಲ್ ಆಗಿ ಮಾತನಾಡಿದರು.

ಕ್ಲಸ್ಟರ್ ಮಾರುಕಟ್ಟೆಗಳ ಬೆಳವಣಿಗೆಯನ್ನು ಹೆಚ್ಚಿಸುವಲ್ಲಿ ಕೆಡಿಇಎಂ ಮುಂಚೂಣಿಯಲ್ಲಿದೆ. ಕರ್ನಾಟಕದ ಶ್ರೇಣಿ-2 ಮತ್ತು ಶ್ರೇಣಿ-3 ಮಾರುಕಟ್ಟೆಗಳು ಅಪಾರ ಸಾಮರ್ಥ್ಯವನ್ನು ಹೊಂದಿವೆ. ತಮ್ಮ ಸಾಮರ್ಥ್ಯ ಮತ್ತು ಹೂಡಿಕೆಯ ಅವಕಾಶಗಳ ವಿಷಯದಲ್ಲಿ ಜಾಗತಿಕವಾಗಿ ಬೆಂಗಳೂರು ಕ್ಲಸ್ಟರ್‌ಗಳನ್ನು ಮೀರಿಸುತ್ತಿವೆ. ದೇಶದ ಡಿಜಿಟಲ್ ಆರ್ಥಿಕತೆಯನ್ನು ಮುನ್ನಡೆಸುವುದಕ್ಕಾಗಿ ದೃಢವಾದ ಡಿಜಿಟಲ್ ಸಾಮರ್ಥ್ಯವನ್ನು ನಿರ್ಮಿಸಲು ರಾಜ್ಯದ ಉದ್ಯಮಗಳು ಗಮನಾರ್ಹವಾದ ಆಸಕ್ತಿ ಹೊಂದಿವೆ ಎಂದರು.