ರಾಜ್ಯ ಸರ್ಕಾರಿ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಕೊಪ್ಪಳದಲ್ಲಿ ಶುಕ್ರವಾರ ಶಾಸಕ ರಾಘವೇಂದ್ರ ಹಿಟ್ನಾಳ ಉದ್ಘಾಟಿಸಿದರು. ನೌಕರರ ಸಂದ ಅಧ್ಯಕ್ಷ ಸಿ.ಎಸ್​.ಷಡಾಕ್ಷರಿ, ಜಿಲ್ಲಾಧ್ಯಕ್ಷ ನಾಗರಾಜ ಜುಮ್ಮನವರ, ರಾಜ್ಯ ಹಿರಿಯ ಉಪಾಧ್ಯಕ್ಷ ಎಸ್​.ಬಸವರಾಜು, ಖಜಾಂಚಿ ಡಾ.ಎಸ್​.ಸಿದ್ದರಾಮಣ್ಣ, ಪ್ರಧಾನ ಕಾರ್ಯದರ್ಶಿ ಟಿ.ಶ್ರೀನಿವಾಸ ಇತರರಿದ್ದರು. 
ಜಿಲ್ಲೆ

ಶಿಕ್ಷಣದಿಂದ ಪ್ರಗತಿ ಸಾಧ್ಯ, ಶಾಸಕ ರಾಘವೇಂದ್ರ ಹಿಟ್ನಾಳ ಅಭಿಮತ

Kopala - Raveendra V K

ಕೊಪ್ಪಳ: ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸೋಣ. ಶಿಕ್ಷಣದಿಂದ ಅಭಿವೃದ್ಧಿ ಸಾಧ್ಯ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು.

ನಗರದ ಸಾಹಿತ್ಯ ಭವನದಲ್ಲಿ ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಸಂದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸರ್ಕಾರ ಉತ್ತಮವಾಗಿ ಆಡಳಿತ ನೀಡಲು ನೌಕರರು ಕಾರಣ. ನಿಮ್ಮೆಲ್ಲ ಬೇಡಿಕೆ ಈಡೇರಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಮಾತು ಕೊಟ್ಟಂತೆ 7ನೆ ವೇತನ ಆಯೋಗ ಜಾರಿ ಮಾಡಲಾಗಿದೆ. ಹಳೇ ಪಿಂಚಣಿ ಯೋಜನೆ ಮರು ಜಾರಿ ಮಾಡುತ್ತೇವೆ. ಆರೋಗ್ಯ ರಕ್ಷಣೆಗೂ ಹಲವು ಯೋಜನೆ ಜಾರಿಗೆ ಬೇಡಿಕೆ ಇಟ್ಟಿದ್ದು, ಪರಿಶೀಲನೆ ನಡೆಸಿ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು. ನೌಕರರ ಮಕ್ಕಳು ಇಷ್ಟೊಂದು ಸಂಖ್ಯೆಯಲ್ಲಿ ಉತ್ತಮ ಅಂಕ ಪಡೆದಿರುವುದು ಖುಷಿಯ ವಿಷಯ. ಆದರೆ, ಕಳೆದ ವರ್ಷದ ಎಸ್ಸೆಸ್ಸೆಲ್ಸಿ ಲಿತಾಂಶ ಕುಸಿದಿದ್ದು ತಲೆ ತಗ್ಗಿಸುವ ಕೆಲಸ. ಲಿತಾಂಶ ಸುಧಾರಣೆಗೆ ಕ್ರಮಗಳಾಗಲಿ. ನಮ್ಮ ಮಕ್ಕಳು ಶಿಕ್ಷಣ ಪಡೆದಾಗಲೇ ನಾಡು ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.

ರಾಜ್ಯ ಸರ್ಕಾರಿ ನೌಕರರ ಸಂದ ಅಧ್ಯಕ್ಷ ಸಿ.ಎಸ್​.ಷಡಾಕ್ಷರಿ ಮಾತನಾಡಿ, ನೌಕರರು ನಮ್ಮ ಕುಟುಂಬ. ಸಂಟನೆಯಿಂದ ಸಾಕಷ್ಟು ಕೆಲಸ ಮಾಡಿದ್ದೇವೆ. ಶಿಸ್ತುಬದ್ಧವಾಗಿ ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಿದ್ದೇವೆ. ಸರ್ಕಾರದ ಇತಿಮಿತಿಯೊಳಗೆ ನಮಗೆ ಪೂರಕವಾಗಿ 20ಕ್ಕೂ ಹೆಚ್ಚು ಆದೇಶ ಬಂದಿವೆ. ಸತತ ಹೋರಾಟದ ಲವಾಗಿ 7ನೇ ವೇತನ ಆಯೋಗ ಜಾರಿಯಾಗಿದೆ. ನಾನು ಹೊಂದಾಣಿಕೆ, ರಾಜೀ ಮಾಡಿಕೊಳ್ಳಲ್ಲ. ಕೇಂದ್ರ ಮಾದರಿ ವೇತನ, ಒಪಿಎಸ್​ ಮರು ಜಾರಿ, ಆರೋಗ್ಯ ಸೇವೆ ಸಿಗುವವರೆಗೂ ಹೋರಾಟ ಮುಂದುವರೆಯಲಿದೆ. ಬೇಡಿಕೆ ಈಡೇರಿಕೆಗೆಂದೇ ನಾನು ನಾಯಕತ್ವ ವಹಿಸಿಕೊಂಡಿರುವೆ. ನೌಕರರ ಸಮ್ಮುಖದಲ್ಲಿ ಮಕ್ಕಳನ್ನು ಪುರಸ್ಕರಿಸಿದರೆ ಅವರಿಗೆ ಪ್ರೋತ್ಸಾಹ ಸಿಗುತ್ತದೆ ಎಂದರು.

ರಾಜ್ಯ ಸರ್ಕಾರಿ ನೌಕರರ ಸಂದ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಬಿ.ಬಳ್ಳಾರಿ, ಜಿಲ್ಲಾಧ್ಯಕ್ಷ ನಾಗರಾಜ ಜುಮ್ಮನವರ ಮಾತನಾಡಿದರು. ಜಿಪಂ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಸಂದ ರಾಜ್ಯ ಹಿರಿಯ ಉಪಾಧ್ಯಕ್ಷ ಎಸ್​.ಬಸವರಾಜು, ಖಜಾಂಚಿ ಡಾ.ಎಸ್​.ಸಿದ್ದರಾಮಣ್ಣ, ಪ್ರಧಾನ ಕಾರ್ಯದರ್ಶಿ ಟಿ.ಶ್ರೀನಿವಾಸ, ಪ್ರಮುಖರಾದ ಬೀರಪ್ಪ ಅಂಡಗಿ, ಜಗದೀಶ ಜಿ.ಎಚ್​., ಶಂಕ್ರಯ್ಯ, ಅನಿಲ್​ ಕುಮಾರ್​ ಜಿ., ಶರಣೇಗೌಡ ಪಾಟೀಲ್​, ಸೋಮಶೇಖರಗೌಡ, ಬಾಬುಸಾಬ್​ ಲೈನದಾರ ಇತರರಿದ್ದರು.