ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯ ಸರ್ಕಾರಿ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಒಕ್ಕೂಟ ಸಿಡಿದೆದ್ದಿದ್ದು ಒಕ್ಕೂಟದ ಪದಾಧಿಕಾರಿಗಳು ವಿಜಯಪುರದಲ್ಲಿ ಸುದ್ದಿಗೋಷ್ಠಿ ನಡೆಸಿದ್ದಾರೆ. . PFRDA ಕಾಯಿದೆ/ NPS ಪದ್ಧತಿ ರದ್ದುಗೊಳಿಸಿ ನಿಶ್ಚಿತ ಪಿಂಚಣಿ ಪದ್ಧತಿ ಮರುಸ್ಥಾಪಿಸುವುದು.. ಕೇಂದ್ರ ಹಾಗೂ ನೆರೆ ರಾಜ್ಯಗಳ ಮತ್ತು ಹೈಕೋರ್ಟ್‌ನ ನೌಕರರ ವೇತನಕ್ಕೂ ನಮ್ಮ ರಾಜ್ಯದ ನೌಕರರ ದೇತನಕ್ಕೂ ಕನಿಷ್ಠ 40% ವೇತನ ವ್ಯತಾಸವಾಗಿರುವ ಹಿನ್ನೆಲೆಯಲ್ಲಿ ತಕ್ಷಣವೇ ಶೇ. 25ರಷ್ಟು ಮಧ್ಯಂತರ ಪರಿಹಾರ ಘೋಷಿಸುವುದು.. 7ನೇ ವೇತನ ಆಯೋಗದ ಪರಿಷ್ಕರಣೆ ಸಂಬಂಧ ರಾಜ್ಯ ನೌಕರರಿಗೆ ನೀಡಬೇಕಾದ ಹೆಚ್ಚಿನ ದೇತನ ಪರಿಷ್ಕರಣೆಗಾಗಿ ವೇತನ 2023-24ನೇ ಆಯವ್ಯಯದಲ್ಲಿ ಅಂದಾಜು ಅನುದಾನವನ್ನು ಕಾಯ್ದಿರಿಸಿ ಜಾರಿಗೊಳಿಸುವುದು. . ರಾಜ್ಯದಲ್ಲಿ ಸುಮಾರು 2.80 ಲಕ್ಷಕ್ಕೂ ಖಾಲಿ ಇರುವ ಹುದ್ದೆಗಳನ್ನು ಭರ್ತಿಮಾಡುವುದು,. ಆಡಳಿತ ಸುಧಾರಣೆ ನೆಪದಲ್ಲಿ ಶಿಫಾರಸ್ಸು ಮಾಡಲಾಗಿರುವ ಹುದ್ದೆಗಳ ಕಡಿತವನ್ನು ಕೈಬಿಡುವುದು ಮತ್ತು ಸರ್ಕಾರಿ ಸೇವೆಗಳ ಖಾಸಗೀಕರಣ ಕೈಬಿಡುವುದು. ಹೊರಗುತ್ತಿಗೆ ನೌಕರರಿಗೆ ಸುಪ್ರೀಂಕೋರ್ಟ್ ಆದೇಶದಂತೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವುದು ಮತ್ತು ಎಲ್ಲಾ ನೇರ ನೇಮಕಾತಿಯಲ್ಲಿ ಪ್ರಾತಿನಿಧ್ಯ ನೀಡುವುದು. ಕೋವಿಡ್ ಸಮಯದಲ್ಲಿ ಮುಟ್ಟುಗೋಲು ಹಾಕಿಕೊಂಡಿದ್ದ ಬಾಕಿ ಇರುವ 18 ತಿಂಗಳ ತುಟ್ಟಿಭತ್ಯೆಯನ್ನು ಬಿಡುಗಡೆ ಮಾಡುವುದು. ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಫೆಬ್ರುವರಿ 7ರಂದು ವಿಧಾನಸೌಧ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಒಕ್ಕೂಟ ತಿಳಿಸಿದೆ. ರಾಜ್ಯ ಸರ್ಕಾರದ ವಿವಿಧ ಇಲಾಖಾ ಮತ್ತು ವೃಂದ ಸಂಘಗಳು ಒಡಗೂಡಿ ಈ ಬೇಡಿಕೆಗಳ ಈಡೇರಿಕೆಗಾಗಿ 2023ರ ಫೆಬ್ರವರಿ 7ರಂದು ವಿಧಾನಸೌಧ ಚಲೋ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. . ರಾಜ್ಯದ ಎಲ್ಲಾ ನೌಕರ ಬಾಂಧವರು ಸಾಮೂಹಿಕವಾಗಿ ಒಂದು ದಿನದ ರಜೆಯನ್ನು ಹಾಕುವುದರ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಕರೆ ನೀಡಲಾಗಿದೆ, ಎಂದು ರಾಜ್ಯಾಧ್ಯಕ್ಷ ಜೈಕುಮಾರ ಹೆಚ್ ಎಸ್ ತಿಳಿಸಿದ್ದಾರೆ. ಡಿ. ಶಿವಶಂಕರ, ರಂಗಪ್ಪ, ಎಸ್ ಅಭಿಜಿತ್, ಡಾ. ಎಂ ವೆಂಕಟೇಶ, ಡಾ. ಎಸ್ ವಿಜಯಕುಮಾರ, ಸುರೇಶ ಜೇಬಿ, ಅಶೋಕ ಇಲಕಲ್, ಆರ್ ಎಸ್ ಮೆಣಸಗಿ, ಚಂದ್ರಶೇಖರ ಲೆಂಡಿ, ಸಂತೋಷ ಬಿರಾದಾರ ಸೇರಿದಂತೆ ಪ್ರಮುಖರು ಸಮಾವೇಶದಲ್ಲಿ ಇದ್ದರು.